ನವದೆಹಲಿ :ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿ-ಅಂಶಗಳ ಪ್ರಕಾರ 2020ರಲ್ಲಿ ಭಾರತವು ಸೈಬರ್ ಅಪರಾಧದಲ್ಲಿ ಶೇ. 11ರಷ್ಟು ಏರಿಕೆಯಾಗಿದೆ ಎಂದು ವರದಿ ಮಾಡಿದೆ.
ಎನ್‌ಸಿಆರ್‌ಬಿಯ ಭಾರತದಲ್ಲಿ ಅಪರಾಧ 2019ರ ವರದಿಯ ಪ್ರಕಾರ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೈಬರ್ ಅಪರಾಧಗಳ ದತ್ತಾಂಶ 2017ರಲ್ಲಿ 21,796, 2018ರಲ್ಲಿ 27,248 ಪ್ರಕರಣ, 2019ರಲ್ಲಿ 44,735 ಮತ್ತು 2020ರಲ್ಲಿ 50,035 ಎಂದು ಗೃಹ ವ್ಯವಹಾರಗಳ ಸಚಿವಾಲಯ (ಎಂಹೆಚ್‌ಎ) ಗೃಹ ಸಮಿತಿಗೆ ತಿಳಿಸಿದೆ. 2020ರ ದತ್ತಾಂಶವನ್ನು ಎನ್‌ಸಿಆರ್‌ಬಿಯ ಕ್ರೈಮ್ ಇನ್ ಇಂಡಿಯಾ 2020 ವರದಿಯಿಂದ ಪಡೆಯಲಾಗಿದೆ.
2020ರಲ್ಲಿ ಒಟ್ಟು 50,035 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು 2019 ಕ್ಕಿಂತ (44,735 ಪ್ರಕರಣಗಳು) ಶೇ.11.8ರಷ್ಟು ಹೆಚ್ಚಾಗಿದೆ. ಸೈಬರ್ ಕ್ರಿಮಿನಲ್‌ಗಳು ಸೈಬರ್ ಸ್ಪೇಸ್‌ನಲ್ಲಿ ಹೊಸ ವಿಧಾನಗಳು ಮತ್ತು ಹೊಸ ಕ್ರಮಗಳನ್ನು ಅನುಸರಿಸುತ್ತಿರುವುದು ಕಳವಳಕಾರಿ ಎಂದು ಸಮಿತಿ ತಿಳಿಸಿದೆ.