ಜಮ್ಮು :ದೋಡಾದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ 200 ಅಡಿ ಆಳಕ್ಕೆ ಉರುಳಿ ಬಿದ್ದಿದ್ದು, 11 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಣಪತ್ ಸೇತುವೆ ಬಳಿ ಜೆಕೆ 02 ಡಿ 7191 ನೋಂದಣಿಯ ಬಸ್ ಅಪಘಾತಕ್ಕೀಡಾಗಿದೆ. ಭದರ್ವಾದಿಂದ ಜಮ್ಮು ಕಡೆಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ದೋಡಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಗಾಯಾಳುಗಳ ವಿವರ ಇಂತಿದೆ :
1.ಬಸ್ ಚಾಲಕ ಪುಷ್ವಿಂದರ್ ಸಿಂಗ್( 32)
2. ಕ್ಲೀನರ್ ಸುಶೀಲ್ ಸಿಂಗ್ (24)
3. ಮೋಹಾದ್ ಸಬೀರ್ (35)
4. ಅಶೋಕ್ ಕುಮಾರ್ (36)