ಕರ್ನಾಟಕ

karnataka

ETV Bharat / bharat

ಲಸಿಕೆ ಹಾಕಿಸಿಕೊಳ್ಳುತ್ತಿರುವ ಹಿರಿಜೀವಗಳು: ಜಾರ್ಖಂಡ್‌ನಲ್ಲಿ 107ರ ವೃದ್ಧೆಗೆ ವ್ಯಾಕ್ಸಿನ್​ - ಕೊಡರ್ಮಾ

ದೇಶಾದ್ಯಂತ 2ನೇ ಹಂತಹ ಕೊರೊನಾ ವ್ಯಾಕ್ಸಿನೇಷನ್​ ಅಭಿಯಾನ ನಡೆಯುತ್ತಿದ್ದು, ಜಾರ್ಖಂಡ್‌ನ ಕೊಡರ್ಮಾದಲ್ಲಿ 107 ವರ್ಷದ ವದ್ಧೆ ಲಸಿಕೆ ಪಡೆದಿದ್ದಾರೆ.

107-year-old woman receives Covid-19 vaccine in Jharkhand
ಜಾರ್ಖಂಡ್‌ನಲ್ಲಿ 107ರ ವೃದ್ಧೆಗೆ ವ್ಯಾಕ್ಸಿನ್​

By

Published : Mar 22, 2021, 11:49 AM IST

ಕೊಡರ್ಮಾ: ಜಾರ್ಖಂಡ್‌ನ ಕೊಡರ್ಮಾದಲ್ಲಿ ಮಕಿನಾ ಖತೂನ್ ಎಂಬ 107 ವರ್ಷದ ವದ್ಧೆ ಕೋವಿಡ್​ ಲಸಿಕೆಯ ಮೊದಲ ಡೋಸ್ ಪಡೆದು, ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಕೊಡರ್ಮಾ ಜಿಲ್ಲೆಯಲ್ಲಿ 100ರ ಗಡಿ ದಾಟಿದ ವ್ಯಕ್ತಿಯೊಬ್ಬರು ಲಸಿಕೆ ಹಾಕಿಸಿಕೊಂಡ ಮೊದಲನೆಯವರು ಮಕಿನಾ ಖತೂನ್ ಆಗಿದ್ದಾರೆ. ವ್ಯಾಕ್ಸಿನೇಷನ್​ ಬಳಿಕ ಇವರನ್ನು ನಿಗಾದಲ್ಲಿರಿಸಲಾಗಿದ್ದು, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ತಮಿಳುನಾಡಿನ ಚೆನ್ನೈನ 108 ವರ್ಷದ ವೃದ್ಧೆ, ಬೆಂಗಳೂರಿನ 103 ವರ್ಷದ ವೃದ್ಧೆ ಹಾಗೂ ರಾಜಸ್ಥಾನದ ಕೋಟಾದಲ್ಲಿ 106 ವರ್ಷದ ವೃದ್ಧೆಯೊಬ್ಬರು ಕೊರೊನಾ ಲಸಿಕೆ ಪಡೆಯುವ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ಓದಿ:ಮಾಸ್ಕ್​ ದಂಡ; 20 ಲಕ್ಷ ಜನರಿಂದ 40 ಕೋಟಿ ವಸೂಲಿ.. ಎಲ್ಲಿ ಗೊತ್ತಾ?

ದೇಶಾದ್ಯಂತ 2ನೇ ಹಂತಹ ಕೊರೊನಾ ವ್ಯಾಕ್ಸಿನೇಷನ್​ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್​ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರ ಬಳಿಕ ಇದೀಗ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ. ಜನವರಿ 16ರಿಂದ ಈವರೆಗೆ ಒಟ್ಟು 4,50,65,998 ಮಂದಿಗೆ ಲಸಿಕೆ ನೀಡಲಾಗಿದೆ.

ABOUT THE AUTHOR

...view details