ಕೋಟಾ (ರಾಜಸ್ತಾನ):ನಿನ್ನೆ ಕೋಟಾದಲ್ಲಿ 106 ವರ್ಷದ ವೃದ್ಧೆಯೊಬ್ಬರು ಕೊರೊನಾ ಲಸಿಕೆ ಪಡೆಯುವ ಮೂಲಕ ಗಮನಸೆಳೆದಿದ್ದಾರೆ.
ಗುರ್ಜರಿಯಖೇರಿ (ಕಮಲ್ಪುರ) ಗ್ರಾಮದ 106 ವರ್ಷದ ವೃದ್ಧೆ ಜಿಲ್ಲೆಯ ಮೊರಾಕ್ ಸಿಎಚ್‌ಸಿಯಲ್ಲಿ ಮೊದಲ ಡೋಸ್ ಲಸಿಕೆ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಸಿಕೆ ಸುರಕ್ಷಿತವಾಗಿದೆ. ನಾನು ವ್ಯಾಕ್ಸಿನೇಷನ್ ಬಳಿಕ ಆರಾಮವಾಗಿದ್ದೇನೆ. ಕೋವಿಡ್ ವಿರುದ್ಧ ಹೋರಾಡಲು ಎಲ್ಲರೂ ಮುಂದೆ ಬರಬೇಕು. ಯಾವುದೇ ಗೊಂದಲ ಮತ್ತು ಭಯವಿಲ್ಲದೆ ಎಲ್ಲರೂ ಲಸಿಕೆ ಪಡೆಯಬೇಕು ಎಂದು ಹೇಳಿದರು.