ನವದೆಹಲಿ: ಅಗತ್ಯ ವೈದ್ಯಕೀಯ ಉಪಕರಣಗಳು ಮತ್ತು ಆಮ್ಲಜನಕದ ಸುಲಭ ಲಭ್ಯತೆಗಾಗಿ 100 ಹೊಸ ಆಸ್ಪತ್ರೆಗಳು ಪಿಎಂ-ಕೇರ್ಸ್ ಫಂಡ್ ಅಡಿಯಲ್ಲಿ ತಮ್ಮದೇ ಆದ ಆಮ್ಲಜನಕ ಘಟಕವನ್ನು ಹೊಂದಲಿವೆ. ಅಲ್ಲದೇ ಇನ್ನೂ 50,000 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ಆಮದು ಮಾಡಿಕೊಳ್ಳಲು ಟೆಂಡರ್ ಕರೆಯಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಅಗತ್ಯ ವೈದ್ಯಕೀಯ ಉಪಕರಣಗಳು ಮತ್ತು ಆಮ್ಲಜನಕದ ಲಭ್ಯತೆಯನ್ನು ಪರಿಶೀಲಿಸಲು ಗುರುವಾರ ಎಂಪವರ್ಡ್ ಗ್ರೂಪ್ 2 (ಇಜಿ 2) ಸಭೆ ನಡೆಸಲಾಯಿತು. ಈ ಸಭೆಯು ಕ್ರಮವಾಗಿ ಏಪ್ರಿಲ್ 20, ಏಪ್ರಿಲ್ 25 ಮತ್ತು ಏಪ್ರಿಲ್ 30 ರವರೆಗೆ ತಮ್ಮ ಯೋಜಿತ ಬೇಡಿಕೆಯನ್ನು ಪೂರೈಸಲು 12 ಹೆಚ್ಚಿನ ಹೊರೆ ಹೊಂದಿರುವ ರಾಜ್ಯಗಳಿಗೆ 4880 ಮೆಟ್ರಿಕ್ ಟನ್, 5619 ಮೆಟ್ರಿಕ್ ಟನ್ ಮತ್ತು 6593 ಮೆಟ್ರಿಕ್ ಟನ್ ಆಮ್ಲಜನಕ ಬೇಕಿದೆ ಎಂದು ಗುರುತಿಸಿದೆ.
ಇದನ್ನೂ ಓದಿ:ಪುರಾತತ್ವ ಇಲಾಖೆಯಡಿ ಬರುವ ಎಲ್ಲಾ ಸ್ಮಾರಕಗಳು ಮೇ 15ರವರೆಗೆ ಬಂದ್
ವೈದ್ಯಕೀಯ ಆಮ್ಲಜನಕದ ನಿರಂತರ ಪೂರೈಕೆಯನ್ನು ಬೆಂಬಲಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಇಜಿ 2 ನಿರಂತರವಾಗಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಮತ್ತು ಪೂರೈಕೆಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.