ಬೋಲ್ಪುರ(ಪಶ್ಚಿಮ ಬಂಗಾಳ):ಮನುಷ್ಯನ ಹೊಟ್ಟೆಯಲ್ಲಿ ಕರಳು, ಜಠರ ಇರುತ್ತವೆ. ಪ್ಲಾಸ್ಟಿಕ್, ಪೈಪ್ ಇರೋದು ಅಸಾಧ್ಯ. ವಿಚಿತ್ರ ಅಂದರೆ ಪಶ್ಚಿಮಬಂಗಾಳದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 100 ಗ್ರಾಂ ಪ್ಲಾಸ್ಟಿಕ್ ಮತ್ತು 3 ಅಡಿ ಉದ್ದದ ಪೈಪ್ ಅನ್ನು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ಘಟನೆ ನಡೆದಿದೆ.
ಬೋಲ್ಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಹೊಟ್ಟೆ ನೋವೆಂದು ಚಿಕಿತ್ಸೆಗೆ ದಾಖಲಾದ ವ್ಯಕ್ತಿಯನ್ನು ತಪಾಸಣೆ ಮಾಡಿದಾಗ ಹೊಟ್ಟೆಯಲ್ಲಿ ಏನೋ ತುಂಬಿಕೊಂಡಂತೆ ಕಂಡುಬಂದಿದೆ. ಈ ವೇಳೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೇ ಅಚ್ಚರಿ ಪಡುವಂತೆ 100 ಗ್ರಾಂ ಪ್ಲಾಸ್ಟಿಕ್ ಹೊಟ್ಟೆಯಲ್ಲಿ ಕಂಡು ಬಂದಿದೆ. ಇದಲ್ಲದೇ, ಕಲ್ಮಶಗಳಿಂದ ಕೂಡಿದ 3 ಅಡಿ ಉದ್ದ 3 ಇಂಚು ದಪ್ಪ ಇರುವ ಪೈಪ್ನಂತೆ ಕಂಡು ಬಂದ ವಸ್ತುವನ್ನೂ ಕೂಡ ಹೊಟ್ಟೆಯಿಂದ ತೆಗೆಯಲಾಗಿದೆ.