ಹೈದರಾಬಾದ್ (ತೆಲಂಗಾಣ): ಹೈದರಾಬಾದ್ ನಗರದಲ್ಲಿ ಭೂಮಿ ಹರಾಜು ಪ್ರಕ್ರಿಯೆ ಅನಿರೀಕ್ಷಿತ ಭಾರಿ ಬೆಲೆಗಳನ್ನು ಪಡೆಯುತ್ತಿದೆ. ಇತ್ತೀಚೆಗಷ್ಟೇ ಇಲ್ಲಿನ ಕೋಕಾಪೇಟೆ ಭೂಮಿ ಹರಾಜು ಸಂಚಲನ ಮೂಡಿಸಿತ್ತು. ಕೋಕಾಪೇಟೆಯಲ್ಲಿ ಒಂದು ಎಕರೆ 100 ಕೋಟಿ ರೂಪಾಯಿಗೆ ಮಾರಾಟವಾಗಿತ್ತು. ಈಗ ರಾಜೇಂದ್ರನಗರದ ಬುದ್ವೆಲ್ನಲ್ಲಿ 100 ಎಕರೆ ಭೂಮಿಯನ್ನು ಎಚ್‌ಎಂಡಿಎ ಹರಾಜು ಮಾಡಿದ್ದು, ಸಾವಿರಾರು ಕೋಟಿ ರೂ.ಗೆ ಮಾರಾಟವಾಗಿದೆ.
ಗುರುವಾರ ಎರಡು ಅಧಿವೇಶನಗಳಲ್ಲಿ ಎಚ್‌ಎಂಡಿಎ ಹರಾಜು ಪ್ರಕ್ರಿಯೆ ನಡೆಸಿತ್ತು. ಒಟ್ಟು ಭೂಮಿಯನ್ನು 14 ಪ್ಲಾಟ್‌ಗಳಾಗಿ ವಿಂಗಡಿಸಲಾಗಿತ್ತು. ಬೆಳಗಿನ ಅವಧಿಯಲ್ಲಿ ಏಳು ಪ್ಲಾಟ್‌ಗಳು 2,057 ಕೋಟಿ ರೂಪಾಯಿಗೆ ಮಾರಾಟವಾದರೆ, ಎರಡನೇ ಅಧಿವೇಶನದಲ್ಲಿ ಏಳು ಪ್ಲಾಟ್‌ಗಳು 1,568.06 ಕೋಟಿ ರೂಪಾಯಿಗೆ ಮಾರಾಟವಾದವು.
ಎಚ್‌ಎಂಡಿಎ ಸಂಪೂರ್ಣ ನೂರು ಎಕರೆಗೆ 2,000.20 ಕೋಟಿ ರೂ.ಗಳ ಆಫ್‌ಸೆಟ್ ಬೆಲೆ ನಿಗದಿಪಡಿಸಿತ್ತು. ಆದ್ರೆ ಆ 100 ಎಕರೆ ಅಂದಾಜಿಗಿಂತ ಒಂದೂವರೆ ಪಟ್ಟು ಜಾಸ್ತಿ ಬೆಲೆಗೆ ಮಾರಾಟವಾಗಿದೆ. ಇದರರ್ಥ 3,625.73 ಕೋಟಿ ರೂಪಾಯಿ ಸರ್ಕಾರದ ಬೊಕ್ಕಸ ಸೇರಿದೆ.
ಕೋಕಾಪೇಟೆಯಲ್ಲಿ ಎಕರೆಗೆ ಕನಿಷ್ಠ 35 ಕೋಟಿ ರೂಪಾಯಿ ಬೆಲೆಯಿದೆ. ಅದರಂತೆ ಬುದ್ವೇಲ್‌ನಲ್ಲಿ ಎಕರೆಗೆ ಕನಿಷ್ಠ 20 ಕೋಟಿ ರೂಪಾಯಿ ಇದೆ. ರಾಜೇಂದ್ರನಗರ ಔಟರ್ ರಿಂಗ್ ರೋಡ್ ನಿರ್ಗಮನ ರಸ್ತೆಯ ಸಮೀಪದಲ್ಲಿದೆ. ವಿಮಾನ ನಿಲ್ದಾಣ ಮತ್ತು ಐಟಿ ಕಾರಿಡಾರ್‌ಗಳನ್ನು ಇಲ್ಲಿಂದ ಸುಲಭವಾಗಿ ತಲುಪಬಹುದು. ನಗರದಿಂದ ಬರುವವರು ಅತ್ತಾಪುರ ರಾಂಪ್‌ನಲ್ಲಿ ಪಿ.ವಿ.ಎಕ್ಸ್‌ಪ್ರೆಸ್‌ವೇ ಇಳಿದು ರಾಜೇಂದ್ರನಗರದಿಂದ ಈ ಬಡಾವಣೆ ತಲುಪಬಹುದು. ಈ ಲೇಔಟ್ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ.
ಕೋಕಾಪೇಟೆ ಬಡಾವಣೆಯಲ್ಲಿ ದೊಡ್ಡ ದೊಡ್ಡ ಕಂಪನಿಗಳೆಲ್ಲ ಜಮೀನು ಪಡೆಯಲು ಪೈಪೋಟಿ ನಡೆಸಿದ್ದವು. ಆದರೆ ಕೆಲವು ಕಂಪನಿಗಳಿಗೆ ಮಾತ್ರ ನಿವೇಶನ ಸಿಕ್ಕಿದೆ. ಪ್ರಸ್ತುತ ಆ ಎಲ್ಲಾ ಕಂಪನಿಗಳು ಬುದ್ವೇಲ್‌ನಲ್ಲಿ ಪೈಪೋಟಿ ನಡೆಸಿವೆ. ಕೋಕಾಪೇಟ್‌ನಂತೆಯೇ ಇದನ್ನು ಬಹು ನಿರ್ಮಾಣಗಳ ವಲಯದ ಅಡಿಯಲ್ಲಿ ನಿಯೋಜಿಸಲಾಗಿರುವುದರಿಂದ ಇಷ್ಟೊಂದು ಬೇಡಿಕೆ ಬಂದಿದೆ.
ಇದನ್ನೂ ಓದಿ:ಎಲ್ಲ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಿರುವ ಕುರಿತು ವಿವರಣೆ ನೀಡಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ