ಕೋಟಾ(ರಾಜಸ್ಥಾನ):ಮಗುವಿನ ಹೊಟ್ಟೆಯಲ್ಲಿ ಕಳೆದ 10 ದಿನಗಳಿಂದ ಇದ್ದ ಕೀಲಿ ಕೈಯನ್ನ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಹೊರತೆಗೆಯಲಾಗಿದೆ. ಇದೀಗ ಮಗು ಪ್ರಾಣಪಾಯದಿಂದ ಪಾರಾಗಿದೆ.
ಆಟವಾಡುತ್ತಿದ್ದ ವೇಳೆ ಮಗುವೊಂದು ಬೀಗವನ್ನ ನುಗಿತು. ಕಳೆದ 10 ದಿನಗಳಿಂದ ಅದು ಹೊಟ್ಟೆಯಲ್ಲಿದ್ದ ಕಾರಣ ಅದು ಹೊಟ್ಟೆ ನೋವು ಹಾಗೂ ವಾಂತಿಯಿಂದ ಅಳಲು ಶುರು ಮಾಡಿದೆ. ಈ ವೇಳೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸ್ರೇ ಮಾಡಿಸಿದ್ದಾರೆ. ಮಗುವಿನ ಹೊಟ್ಟೆಯಲ್ಲಿ ಬೀಗ ಇರುವುದು ಪತ್ತೆಯಾಗಿದೆ.