ಅಲಿಗಢ: ಉತ್ತರ ಪ್ರದೇಶದ ಅಲಿಗಢದ ವ್ಯಕ್ತಿಯೊಬ್ಬರು ತಾವು ಸಾಕಿದ್ದ ಗಿಳಿಯನ್ನು ಕಳೆದುಕೊಂಡಿದ್ದು, ಅದನ್ನು ಹುಡುಕಿಕೊಟ್ಟವರಿಗೆ 10,000 ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ದೀನ್ ದಯಾಳ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಎಸ್.ಕೆ. ವರ್ಶ್ನಿ ಅವರು ವಿದೇಶಿ ತಳಿಯ ಗಿಳಿಯೊಂದನ್ನು ಸಾಕಿದ್ದರು. ಕೆಲ ದಿನಗಳ ಹಿಂದೆ ಆ ಗಿಳಿ ಮನೆಯಿಂದ ಕಾಣೆಯಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ.