ಕರ್ನಾಟಕ

karnataka

ETV Bharat / bharat

ಆಸ್ಪತ್ರೆಯ ಬೆಂಕಿ ಅವಘಡದಲ್ಲಿ ನವಜಾತ ಶಿಶುಗಳ ಸಾವು: ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ - ಬೆಂಕಿ ಅವಘಡದಲ್ಲಿ ಮಕ್ಕಳು ಸಾವು

ಮುಂಜಾನೆ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 17 ಮಕ್ಕಳಲ್ಲಿ 7 ಮಕ್ಕಳನ್ನು ರಕ್ಷಿಸಲಾಗಿದೆ. 10 ಮಕ್ಕಳು ಸಾವನ್ನಪ್ಪಿವೆ.

babies
babies

By

Published : Jan 9, 2021, 6:44 AM IST

Updated : Jan 9, 2021, 11:59 AM IST

ನಾಗ್ಪುರ (ಮಹಾರಾಷ್ಟ್ರ):ಇಲ್ಲಿನ ಭಂಡಾರ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಎಸ್‌ಎನ್‌ಐಸಿ) ಸಂಭವಿಸಿದ ಬೆಂಕಿ ಅವಘಡದಲ್ಲಿ ಹತ್ತು ನವಜಾತ ಶಿಶುಗಳು ಮೃತಪಟ್ಟಿವೆ.

ಮುಂಜಾನೆ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 17 ಮಕ್ಕಳಲ್ಲಿ 7 ಮಕ್ಕಳನ್ನು ರಕ್ಷಿಸಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿ ಆಸ್ಪತ್ರೆಯಲ್ಲಿದ್ದವರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿತು.

ಆಸ್ಪತ್ರೆಯಲ್ಲಿ ಬೆಂಕಿ ಅವಘಡ

ಎಸ್‌ಎನ್‌ಐಸಿ ಎರಡು ಘಟಕಗಳನ್ನು ಹೊಂದಿದೆ. ಔಟ್ ಬಾರ್ನ್ ಮತ್ತು ಇನ್ ಬಾರ್ನ್. ಇವುಗಳಲ್ಲಿ, ಇನ್ ಬಾರ್ನ್‌ನಿಂದ ಏಳು ಮಕ್ಕಳನ್ನು ರಕ್ಷಿಸಲಾಗಿದೆ ಮತ್ತು ಔಟ್ ಬಾರ್ನ್ ಘಟಕದಲ್ಲಿದ್ದ 10 ಮಕ್ಕಳು ಸಾವನ್ನಪ್ಪಿವೆ.

ಅಗ್ನಿಶಾಮಕ ದಳ

ಶಿಶುಗಳ ಸಾವಿನ ದುರ್ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ಸಂತಾಪ ಸೂಚಿಸಿದ್ದು, ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿ ಟ್ವೀಟ್ ಮಾಡಿದ್ದಾರೆ.

ಈ ಅವಘಡದಲ್ಲಿ ಶಿಶುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಘೋಷಿಸಿದ್ದಾರೆ.

ಘಟನೆಯ ತುರ್ತು ಆಧಾರದ ಮೇಲೆ ಎಲ್ಲಾ ಆಸ್ಪತ್ರೆಗಳ ಲೆಕ್ಕಪರಿಶೋಧನೆಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಅಜಿತ್ ಪವಾರ್ ಆದೇಶಿಸಿದ್ದಾರೆ.

Last Updated : Jan 9, 2021, 11:59 AM IST

ABOUT THE AUTHOR

...view details