ಚೈಬಸ (ಜಾರ್ಖಂಡ್):ಮಾರ್ಚ್ 4ರಂದು ಟೋಕ್ಲೊ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಸ್ಫೋಟ ನಡೆಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ 10 ನಕ್ಸಲರನ್ನು ಜಾರ್ಖಂಡ್ಪೊಲೀಸರು ಚೈಬಾಸಾ ವಲಯದಲ್ಲಿ ಬಂಧಿಸಿದ್ದಾರೆ. ಈ ವೇಳೆ ಮೂವರು ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ.
ಸ್ಫೋಟ ನಡೆಸುವ ಮೊದಲು ಭದ್ರತಾ ಪಡೆಗಳ ಚಲನವಲನದ ಬಗ್ಗೆ ಅಧ್ಯಯನ ನಡೆಸಿದ್ದರು ಎಂಬುದನ್ನು ಬಂಧಿತ ನಕ್ಸಲರು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
"ಮಾರ್ಚ್ 4 ರಂದು ನಡೆಸಲಾದ ಐಇಡಿ ಸ್ಫೋಟದಲ್ಲಿ ಜಾರ್ಖಂಡ್ ಪೊಲೀಸ್ ದಳದ ಜಗ್ವಾರ್ ತಂಡದ ಮೂವರು ಯೋಧರು ಹುತಾತ್ಮರಾಗಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ 10 ನಕ್ಸಲರನ್ನು ಬಂಧಿಸಲಾಗಿದ್ದು, ಇವರೆಲ್ಲರೂ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಅಲ್ಲದೇ ಇವರೆಲ್ಲರೂ ಐಇಡಿ ಮತ್ತು ಕ್ಲೇಮೋರ್ ಸ್ಫೋಟ ನಡೆಸುವ ಬಗ್ಗೆ ಪರಿಣತಿ ಹೊಂದಿದ್ದರು." ಎಂದು ಪೊಲೀಸರು ಹೇಳಿದ್ದಾರೆ.