ಗುವಾಹಟಿ: ಅಸ್ಸೋಂ ಪೊಲೀಸರು ಮತ್ತು ಕೇಂದ್ರ ಏಜೆನ್ಸಿಗಳ ಸಹಯೋಗದಲ್ಲಿ ಇಂದು ಅಸ್ಸೋಂನಲ್ಲಿ 10 ಮಂದಿ ಜಿಹಾದಿ ಗುಂಪುಗಳ ಸದಸ್ಯರನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಕಳೆದ 48 ಗಂಟೆಗಳಲ್ಲಿ ಅಸ್ಸೋಂ ಪೊಲೀಸರು ನಡೆಸಿದ ಕಾರ್ಯಾಚರಣೆ ಪರಿಣಾಮ 10 ಸದಸ್ಯರನ್ನು ಬಂಧಿಸಿದ್ದಾರೆ. ಬಾಂಗ್ಲಾದೇಶದ ಜಿಹಾದಿ ಸಂಘಟನೆಯ ಸಕ್ರಿಯ ಸದಸ್ಯ ಅಮಿರುದ್ದೀನ್ ಅಲಿ ಎಂಬಾತನಿಂದ ಮಾರಿಗಾಂವ್ ಜಿಲ್ಲೆಯಲ್ಲಿ ಧಾರ್ಮಿಕ ಮದರಸಾವನ್ನು ನಡೆಸುತ್ತಿರುವ ವ್ಯಕ್ತಿಯೊಬ್ಬರು ಹಣ ಪಡೆದಿದ್ದಾರೆ ಎಂದು ಅಸ್ಸೋಂನ ಎಡಿಜಿಪಿ (ಎಸ್‌ಬಿ) ಶ್ರೀ ಹಿರೇನ್ ನಾಥ್ ಗುವಾಹಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಬಂಧಿತ ಮದರಸಾ ಶಿಕ್ಷಕನ ಹೆಸರು ಎಂ ಡಿ ಮುಫ್ತಿ ಮುಸ್ತಫಾ. ಈ ಮದರಸಾ ಶಿಕ್ಷಕರಿಗೆ ನೆರೆಯ ದೇಶದ ಜೆಹಾದಿಗಳ ಸಂಪರ್ಕದ ಬಗ್ಗೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಈ ಧಾರ್ಮಿಕ ಶಿಕ್ಷಕ ಮರಿಗಾಂವ್ ಜಿಲ್ಲೆಯ ಚಹರಿಯಾ ಗಾಂವ್‌ನ ಜಮಿಯುಲ್ ಹುದಾ ಮದರಸವನ್ನು ನಡೆಸುತ್ತಿದ್ದರು. ಘಟನೆ ಹಿನ್ನೆಲೆ ಅಸ್ಸೋಂ ಪೊಲೀಸರು ನಿನ್ನೆ ಸಂಜೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಕಾರ್ಯಾಚರಣೆ ನಡೆಸಿದ್ದಾರೆ.