ಕಾನ್ಪುರ/ಲಖನೌ(ಉತ್ತರ ಪ್ರದೇಶ) : ಲಖನೌ ಮತ್ತು ಕಾನ್ಪುರದಲ್ಲಿ ಮಂಗಳವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಹತ್ತು ಮಂದಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣ: ಒಟ್ಟು ಹತ್ತು ಮಂದಿ ನೀರಿನಲ್ಲಿ ಮುಳುಗಿ ನಾಪತ್ತೆ, ಮುಂದುವರಿದ ಶೋಧ - ಈಟಿವಿ ಭಾರತ ಕನ್ನಡ
ಉತ್ತರಪ್ರದೇಶದ ಗೋಮತಿ, ಗಂಗಾ ನದಿಗಳಲ್ಲಿ 10 ಮಂದಿ ನಾಪತ್ತೆಯಾಗಿದ್ದಾರೆ. ಹಿರಿಯ ಅಧಿಕಾರಿಗಳು ಮತ್ತು ಈಜು ತಜ್ಞರು ಶೋಧ ಮುಂದುವರೆಸಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣ
ಲಖನೌದಲ್ಲಿ ನಾಲ್ವರು ಯುವಕರು ವಿಗ್ರಹ ನಿಮಜ್ಜನದ ಸಮಯದಲ್ಲಿ ದೋಣಿಯಲ್ಲಿ ಸಮತೋಲನ ಕಳೆದುಕೊಂಡಾಗ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಕಾನ್ಪುರದಲ್ಲಿ ನಾಲ್ವರು ಯುವತಿಯರು ಕಾಲುಜಾರಿ ನದಿಗೆ ಬಿದ್ದು ಕೊಚ್ಚಿಹೋಗಿದ್ದಾರೆ. ಅವರನ್ನು ರಕ್ಷಿಸಲು ಹೋದ ಇಬ್ಬರು ಯುವಕರೂ ಸಹ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಎರಡೂ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು, ಮುಳುಗು ತಜ್ಞರು ಶೋಧಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ :ಬಸ್, ಜೀಪ್ ಡಿಕ್ಕಿ: ಐವರು ಸ್ಥಳದಲ್ಲೇ ಸಾವು