ಹೈದರಾಬಾದ್:ಮುಸ್ಲಲ್ಮಾನರ ಪವಿತ್ರ ಮಾಸವಾದ ರಂಜಾನ್ ಕಡೆಯ ದಿನವಾದ ಈದ್ ಉಲ್ ಫಿತರ್ ಇಂದು. ಒಂದು ತಿಂಗಳ ಕಾಲ ಉಪವಾಸ ಆಚರಣೆ (ರೋಜಾವನ್ನು) ಈ ದಿನ ಅಂತ್ಯಗೊಳಿಸುತ್ತಾರೆ. ಇನ್ನು ಪವಿತ್ರ ರಂಜಾನ್ ಮಾಸ ಬೆಳಗಿನ ಉಪವಾಸ ಮುಗಿದ ಬಳಿಕ ನಡೆಯುವ ಇಫ್ತಾರ್ಗಳು ಪ್ರಖ್ಯಾತಿ. ನಾನಾ ವಿಧದ ಖಾದ್ಯಗಳ ಈ ಇಫ್ತಾರ್ಗಳಲ್ಲಿ ಸದಾ ಮೊದಲ ಪ್ರಶಾಸ್ತ್ಯ ಬಿರಿಯಾನಿಗೆ ಎಂದರೂ ತಪ್ಪಾಗಲಾರದು. ಇನ್ನು ರಂಜಾನ್ನಲ್ಲಿ ಬಿರಿಯಾನಿಗಿಂತಲೂ ಹೆಚ್ಚು ಜನರು ಎಂಜಾಯ್ ಮಾಡುವುದು ಹಲೀಂ ಖಾದ್ಯವನ್ನು. ಆದರೆ, ಈ ಬಾರಿ ಜನರ ಮನಸ್ಸು ಗೆದ್ದಿರುವುದು ಬಿರಿಯಾನಿ.
ಅದರಲ್ಲೂ ಹೈದರಾಬಾದ್ ಎಂದರೆ ಸಾಕು ಬಿರಿಯಾನಿ ಘಮ ಮೂಗಿಗೆ ಬಡಿಯದೇ ಇರಲಾರದು. ಬಗೆಬಗೆಯ ಬಿರಿಯಾನಿ ಖಾದ್ಯಗಳನ್ನು ಸವಿಯುವುದಾಕ್ಕಾಗಿಯೇ ಅನೇಕ ಮಂದಿ ಇಲ್ಲಿಗೆ ಬರುತ್ತಾರೆ ಎಂದರೂ ತಪ್ಪಾಗಲಾರದು. ಇಂತಹ ಹೈದರಾಬಾದ್ನಲ್ಲಿ ಈ ಬಾಗಿ ರಂಜಾನ್ ಸಂದರ್ಭದಲ್ಲಿ ಬಿರಿಯಾನಿ ಹೆಚ್ಚು ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ. ಈ ಸಂಬಂಧ ಸ್ವಿಗ್ಗಿ ದತ್ತಾಂಶ ಹಂಚಿಕೊಂಡಿದೆ.
ಎರಡನೇ ಸ್ಥಾನದಲ್ಲಿ ಹಲೀಂ: ಆದರೆ, ಈ ಬಾರಿ ಹೈದ್ರಾಬಾದ್ನ ಜನ ಈ ನಿಯಮವನ್ನು ಮೀರಿ, ಹಲೀಂಗಿಂತ ಬಿರಿಯಾನಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ. ಈ ವರ್ಷ ರಂಜಾನ್ನಲ್ಲಿ ಅತಿ ಹೆಚ್ಚು ತಿನ್ನಲ್ಪಟ್ಟ ಖಾದ್ಯದಲ್ಲಿ ಬಿರಿಯಾನಿ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಂಜಾನ್ ಮಾಸದಲ್ಲಿ ಜನಪ್ರಿಯ ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿಯಲ್ಲಿ ಬಿರಿಯಾನಿಯೇ ಅತಿ ಹೆಚ್ಚು ಜನರು ಆರ್ಡರ್ ಮಾಡಿದ್ದಾರೆ. ಅದರಲ್ಲೂ ರಂಜಾನ್ ಒಂದೇ ತಿಂಗಳಲ್ಲಿ 10 ಲಕ್ಷ ಬಿರಿಯಾನಿ ಮಾರಾಟವಾಗಿದೆ ಎಂದು ವರದಿ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಇದು ಶೇ 20ರಷ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಇನ್ನು ವಿವಿಧ ರೀತಿಯ ಹಲೀಂಗೆ ಕೂಡ ಜನರು ಮನ್ನಣೆ ನೀಡಿದ್ದು, ಈ ತಿಂಗಳಲ್ಲಿ 4 ಲಕ್ಷ ಹಲೀಂ ಆರ್ಡರ್ ಆಗಿದೆ ಎಂದು ತಿಳಿದು ಬಂದಿದೆ.