ಕರ್ನಾಟಕ

karnataka

ETV Bharat / bharat

ಗುಜರಾತ್‌ನಲ್ಲಿ ಕಾರು-ಟ್ರಕ್ ಮಧ್ಯೆ​ ಭೀಕರ ಅಪಘಾತ: 10 ಮಂದಿ ಸ್ಥಳದಲ್ಲೇ ಸಾವು ​​ - ಅಹಮದಾಬಾದ್ ಅಪಘಾತ

ಘನಘೋರ ದುರಂತದಲ್ಲಿ ಮಗು ಸೇರಿ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಗುಜರಾತ್​ನ ಆನಂದ್ ಜಿಲ್ಲೆಯಲ್ಲಿ ನಡೆದಿದೆ.

Gujarat: 10 killed in car-truck collision
ವೇಗವಾಗಿ ಬಂದ ಟ್ರಕ್​ಗೆ ಮುಖಾಮುಖಿ ಡಿಕ್ಕಿ: 10 ಮಂದಿ ಸ್ಥಳದಲ್ಲೇ ಸಾವು ​​

By

Published : Jun 16, 2021, 10:50 AM IST

ಆನಂದ್(ಗುಜರಾತ್): ಟ್ರಕ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಜರಾತ್​ನ ಆನಂದ್ ಜಿಲ್ಲೆಯ ಇಂದ್ರಾನಾಜ್ ಎಂಬ ಗ್ರಾಮದ ಬಳಿ ನಡೆದಿದೆ.

ತಾರಾಪುರ ಮತ್ತು ಅಹಮದಾಬಾದ್ ಜಿಲ್ಲೆಯ ವಟಮಾನ್​​ಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಾರಾಪುರ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಚಿತ್ರಣ

ಇದನ್ನೂ ಓದಿ:ಗಾಜಾ ಮೇಲೆ ಮತ್ತೆ ದಾಳಿ ಆರಂಭಿಸಿದ ಇಸ್ರೇಲ್: ನೆಪ ಮಾತ್ರಕ್ಕೆ ಕದನ ವಿರಾಮ?

ವೇಗವಾಗಿ ಬರುತ್ತಿದ್ದ ಟ್ರಕ್​ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ನಜ್ಜುಗುಜ್ಜಾದ ಕಾರಿನ ಹೊರತೆಗೆಯಲು ಮತ್ತು ಮೃತರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details