ಇಂದೋರ್ (ಮಧ್ಯಪ್ರದೇಶ): ಭೂಮಿಯ ಅತಿದೊಡ್ಡ ಜೀವಿ ಎಂದು ಕರೆಯಲ್ಪಡುವ ಡೈನೋಸಾರ್ ಇದೀಗ ನಮಗೆ ಕಾಣಸಿಗುವುದಿಲ್ಲ. ಎಷ್ಟೋ ಸಾವಿರಾರು ವರ್ಷಗಳ ಹಿಂದೆಯೇ ಡೈನೋಸಾರ್ಗಳು ಭೂಮಿಯಿಂದ ನಿರ್ನಾಮವಾಗಿವೆ. ಇನ್ನು ಅವುಗಳ ಪಳೆಯುಳಿಕೆಗಳು ಅಪರೂಪಕ್ಕೆ ಎಲ್ಲೆಲ್ಲೋ ಕಂಡು ಬರುತ್ತದೆ.
ಇದೀಗ ಮಧ್ಯಪ್ರದೇಶದ ಬರ್ವಾನಿ ಕಾಡಿನಲ್ಲಿ ಡೈನೋಸಾರ್ನ ಬೃಹದಾಕಾರದ 10 ಮೊಟ್ಟೆಗಳು ಪತ್ತೆಯಾಗಿವೆ. ಈ ಮೊಟ್ಟೆಗಳು 10 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಪುರಾತತ್ವ ಇಲಾಖೆಯ ತಜ್ಞರು ಹೇಳಿದ್ದಾರೆ. ಪುರಾತತ್ವಶಾಸ್ತ್ರಜ್ಞ ಡಾ.ಡಿ.ಪಿ.ಪಾಂಡೆ ಸೆಂಧ್ವಾ ಅವರು ಬರ್ವಾನಿ ಅರಣ್ಯದಲ್ಲಿ ಸಮೀಕ್ಷೆ ನಡೆಸುವ ವೇಳೆ ಈ ಮೊಟ್ಟೆಗಳು ಕಂಡು ಬಂದಿವೆ.