ಕರ್ನಾಟಕ

karnataka

By

Published : Jun 21, 2023, 7:11 AM IST

ETV Bharat / bharat

ಉತ್ತರಪ್ರದೇಶದಲ್ಲಿ ಬಿಸಿಗಾಳಿಗೆ 24 ಗಂಟೆಯಲ್ಲಿ 10 ಬಲಿ.. ನಾಲ್ಕು ದಿನಗಳಲ್ಲಿ 68ಕ್ಕೂ ಹೆಚ್ಚು ಸಾವು!

ಅಜಂಗಢ ಜಿಲ್ಲಾ ಆಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್‌ನಿಂದ 10 ಜನರು ಮೃತಪಟ್ಟಿದ್ದಾರೆ. ಆಘಾತಕಾರಿ ವಿಷಯವೆಂದರೆ ಕಳೆದ 12 ಗಂಟೆಗಳಲ್ಲಿ ಈ ಸಾವುಗಳು ಸಂಭವಿಸಿವೆ. ಅದೇ ಸಮಯದಲ್ಲಿ, ಸುಮಾರು 12 ಜನರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ.

10-died-in-last-12-hours-due-to-heat-stroke-in-azamgarh
ಉತ್ತರಪ್ರದೇಶದಲ್ಲಿ ಬಿಸಿಗಾಳಿಗೆ 24 ಗಂಟೆಯಲ್ಲಿ 10 ಬಲಿ.. ನಾಲ್ಕು ದಿನಗಳಲ್ಲಿ 68ಕ್ಕೂ ಹೆಚ್ಚು ಸಾವು!

ಅಜಂಗಢ(ಉತ್ತರಪ್ರದೇಶ): ಉತ್ತರ ಭಾರತದಾದ್ಯಂತ ಬಿಸಿಗಾಳಿ ಜನರನ್ನು ಹೈರಾಣಾಗಿಸಿದೆ. ಅಜಂಗಢ ಜಿಲ್ಲೆಯಲ್ಲಿ ಬಿಸಿಲಿನ ಝಳಕ್ಕೆ ಪರಿಸ್ಥಿತಿ ಹದಗೆಟ್ಟಿದೆ. ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ರಾತ್ರಿವರೆಗೆ ಬಿಸಿ ವಾತಾವರಣದಿಂದ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರ ಸಂಜೆ ವೇಳೆ ಕೇವಲ ಅರ್ಧಗಂಟೆಯಲ್ಲಿ 24ಕ್ಕೂ ಹೆಚ್ಚು ರೋಗಿಗಳು ಬಿಸಿಲಿನ ತಾಪ ತಾಳಿಕೊಳ್ಳಲಾರದೇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೀಗಾ ದಾಖಲಾದ ಒಬ್ಬ ರೋಗಿಗೆ ವಿಪರೀತ ಜ್ವರ ಇತ್ತು ಎಂದು ತಪಾಸಣೆ ನಡೆಸಿದ ವೈದ್ಯರು ಹೇಳಿದ್ದಾರೆ. ಅದೇ ಸಮಯದಲ್ಲಿ ಇಂತಹುದೇ ಸಮಸ್ಯೆಯಿಂದ ಬಳಲುತ್ತಿದ್ದ 12 ಜನರನ್ನು ಅಜಂಗಢ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ಒಟ್ಟಾರೆ ಜಿಲ್ಲೆಯಲ್ಲಿ ಹೀಟ್​ ಸ್ಟ್ರೋಕ್​ಗೆ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಸಾವಿನ ನಿಖರ ಮಾಹಿತಿ ಲಭ್ಯವಿಲ್ಲ ಎನ್ನಲಾಗಿದೆ.

ಆಸ್ಪತ್ರೆಯ ಮೂಲಗಳ ಪ್ರಕಾರ, ಅಹ್ರೌಲಾದ ಕೊತ್ರಾ ಗ್ರಾಮದ ನಿವಾಸಿ ಪ್ರಭಾವತಿ (80), ಸಿಧಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಟೌಲಿಪುರ ಗ್ರಾಮದ ನಿವಾಸಿ ಸುರೇಶ್ ರೈ (68), ಪಂತಿಖುರ್ದ್ ಗ್ರಾಮದ ಪರ್ಕಲ್ಲಿ ದೇವಿ (70) ಎಂಬುವವರು ಬಿಲರಿಯಾಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಕತಿಹಾರಿ ನಿವಾಸಿ ಬಾಚಿ ದೇವಿ (38), ಅಹ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಬಹೇರಾ ಗ್ರಾಮದ ಭಾಗೀರಥಿ (58), ಜಮೀನ್ ಶೇಖ್‌ಪುರ ನಿವಾಸಿ ಹೀರಾ ಯಾದವ್ (80) ಎಂಬುವವರು ಬಿಸಿಲಿನ ತಾಪ ತಾಳಿಕೊಳ್ಳಲಾರದೇ ಅಸು ನೀಗಿದ್ದಾರೆ.

ಇವರಷ್ಟೇ ಅಲ್ಲ ಅಜಂಗಢದ ಕೊತ್ವಾಲಿ ಪ್ರದೇಶದ ಮಂಚೋಭಾ ಗ್ರಾಮದ ನಿವಾಸಿ ಅಬ್ದುಲ್ ಅಜೀಜ್ (60), ಮೌ ಜಿಲ್ಲೆಯ ದೋಹ್ರಿಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ರೆಯಾನ್ವ್ ಗ್ರಾಮದ ನಿವಾಸಿ ಸುಭಾವತಿ (60), ನರ್ಗೀಸ್ (60) ರಾಣಿ ಕಿ ಸರಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಣಿಕ್ ಶೇಖ್‌ಪುರ್ ಗ್ರಾಮದ ಅಜಂಗಢದಲ್ಲಿ ಅತಿಯಾದ ಸೂರ್ಯನ ಬಿಸಿಲಿನಿಂದ ಪ್ರಾಣ ಬಿಟ್ಟಿದ್ದಾರೆ. ತೀವ್ರ ಜ್ವರ, ವಾಂತಿ, ತಲೆಸುತ್ತು ಕಾಣಿಸಿಕೊಂಡು ಸುಮಾರು 25 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲಾಸ್ಪತ್ರೆ ವೈದ್ಯರು ಹೇಳಿದ್ದೇನು?:ಈ ಬಗ್ಗೆ ಮಾತನಾಡಿರುವ ಜಿಲ್ಲಾ ಆಸ್ಪತ್ರೆಯ ಇಎಂಒ ಡಾ.ಜಾವೇದ್, ಆಸ್ಪತ್ರೆಯಲ್ಲಿ ಕೇವಲ 6 ಸಾವುಗಳು ಆಗಿವೆ ಎಂದು ಹೇಳಿದ್ದಾರೆ. ಸೋಮವಾರ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಸುಮಾರು ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದಲ್ಲದೇ ಜ್ವರ, ವಾಂತಿ, ತಲೆಸುತ್ತು ಕಾಣಿಸಿಕೊಂಡಿದ್ದರಿಂದ ಸೋಮವಾರ ರಾತ್ರಿ ವೇಳೆ 24ಕ್ಕೂ ಹೆಚ್ಚು ಮಂದಿ ಚಿಕಿತ್ಸೆಗೆ ದಾಖಲಾಗಿದ್ದರು.

ಕಳೆದ ನಾಲ್ಕು ದಿನದಲ್ಲಿ ಉತ್ತರಪ್ರದೇಶದಲ್ಲಿ ಒಟ್ಟಾರೆ 68ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಭಾರಿ ಬಿಸಿಲಿನ ಝಳದಿಂದ ಸುಮಾರು 170ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ಕೇಂದ್ರ ಆರೋಗ್ಯ ಸಚಿವರಿಂದ ಪರಿಸ್ಥಿತಿಯ ಪರಿಶೀಲನೆ:ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಂಗಳವಾರ ಉನ್ನತ ಮಟ್ಟದ ಅಧ್ಯಕ್ಷತೆ ವಹಿಸಿ, ಹೀಟ್​ ಸ್ಟ್ರೋಕ್​ ನಿಯಂತ್ರಣ ಹಾಗೂ ಮುಂಜಾಗ್ರತೆ ತೆಗೆದುಕೊಳ್ಳುವ ಬಗ್ಗೆ ಹಾಗೂ ಪರಿಸ್ಥಿತಿಯನ್ನು ಪರಿಶೀಲಿಸಿದರು, ಹಲವಾರು ರಾಜ್ಯಗಳು ತೀವ್ರವಾದ ಶಾಖದ ಅಲೆಯಿಂದ ತತ್ತರಿಸಿರುವ ಬಗ್ಗೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಸಚಿವರು, ಆರೋಗ್ಯ ಸಚಿವಾಲಯ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಐದು ಸದಸ್ಯರ ತಂಡವು ಶಾಖದ ಅಲೆಯಿಂದ ಹೆಚ್ಚು ಪೀಡಿತವಾಗಿರುವ ರಾಜ್ಯಗಳಿಗೆ ಭೇಟಿ ನೀಡಲಿದೆ ಎಂದು ಮಾಹಿತಿ ನೀಡಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಬಿಸಿಗಾಳಿಯ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.

ಇದನ್ನು ಓದಿ:Heat Waves: ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಿರಿ, ತಲೆಗೆ ವಸ್ತ್ರ ಕಟ್ಟಿಕೊಳ್ಳಿ.. IMD 'ಆರೆಂಜ್​' ಅಲರ್ಟ್​!!

ABOUT THE AUTHOR

...view details