ಹೈದರಾಬಾದ್(ತೆಲಂಗಾಣ): ಮುತ್ತಿನ ನಗರಿಯಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ನಿಲೋಫರ್ ಆಸ್ಪತ್ರೆಯ ಆವರಣದಲ್ಲಿ 10 ದಿನದ ನವಜಾತ ವಿಕಲಚೇತನ ಶಿಶುವನ್ನು ಪ್ಲಾಸ್ಟಿಕ್ ಕವರ್‌ನಲ್ಲಿರಿಸಿ ಬಿಟ್ಟುಹೋಗಿರುವ ಘಟನೆ ನಡೆದಿದೆ. ಈ ನವಜಾತ ಶಿಶುವನ್ನ ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು, ಶಿಶುವು ಜಾಂಡೀಸ್‌ನಿಂದ ಬಳಲುತ್ತಿದೆ ಎಂದು ತಿಳಿಸಿದ್ದಾರೆ.
10 ದಿನದ ವಿಕಲಚೇತನ ಶಿಶುವನ್ನ ಪ್ಲಾಸ್ಟಿಕ್ ಕವರ್‌ನಲ್ಲಿರಿಸಿ ಬಿಟ್ಟೋದ ನಿರ್ದಯಿ ಪೋಷಕರು - ಹೈದರಾಬಾದ್ನ ನಿಲೋಫರ್ ಆಸ್ಪತ್ರೆಯ ಆವರಣದಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಹತ್ತು ದಿನದ ನವಜಾತು ಶಿಶು ಪತ್ತೆ
ನಿಲೋಫರ್ ಆಸ್ಪತ್ರೆಯ ಆವರಣದಲ್ಲಿ 10 ದಿನದ ಮಗುವನ್ನು ಪ್ಲಾಸ್ಟಿಕ್ ಕವರ್‌ನಲ್ಲಿರಿಸಿ ಬಿಟ್ಟುಹೋಗಿರುವ ಅಮಾನವೀಯ ಘಟನೆ ನಡೆದಿದೆ. ಮಗುವು ದೈಹಿಕವಾಗಿ ಅಶಕ್ತವಾಗಿರುವುದರಿಂದ ಪೋಷಕರು ಬಿಟ್ಟುಹೋಗಿದ್ದಾರೆ ಎಂದು ವೈದ್ಯರು ಶಂಕಿಸಿದ್ದಾರೆ.

ಪ್ಲಾಸ್ಟಿಕ್ ಕವರ್‌ನಲ್ಲಿ ನವಜಾತು ಶಿಶು ಪತ್ತೆ
ನವಜಾತು ಶಿಶುವನ್ನ ಪ್ಲಾಸ್ಟಿಕ್ ಕವರ್‌ನಲ್ಲಿರಿಸಿ ಬಿಟ್ಟೋದ ನಿರ್ದಯಿ ಪೋಷಕರು
ಶಿಶು ದೈಹಿಕವಾಗಿ ಅಶಕ್ತವಾಗಿರುವುದರಿಂದ ಪೋಷಕರು ಬಿಟ್ಟುಹೋಗಿದ್ದಾರೆ ಎಂದು ವೈದ್ಯರು ಶಂಕಿಸಿದ್ದಾರೆ. ವೈದ್ಯರು ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡುತ್ತಿದ್ದಾರೆ. ಈ ಕುರಿತು ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಸ್ಪತ್ರೆಯಲ್ಲಿ ಮಗುವನ್ನು ಬಿಟ್ಟು ಹೋದವರನ್ನು ಶೀಘ್ರದಲ್ಲೇ ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Last Updated : Apr 4, 2022, 4:35 PM IST