ಶ್ರೀನಗರ (ಜಮ್ಮು-ಕಾಶ್ಮೀರ):ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಯಾಸೀನ್ ಮಲಿಕ್ಗೆ ಜೈಲು ಶಿಕ್ಷೆ ವಿಧಿಸುವ ಸಂಬಂಧ ದೇಶದ್ರೋಹದ ಘೋಷಣೆಗಳನ್ನು ಕೂಗಿದ್ದ ಹತ್ತು ಜನ ಆರೋಪಿಗಳನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಯಾಸೀನ್ ಮನೆ ಬಳಿ ಕಲ್ಲು ತೂರಾಟ ಕೂಡ ನಡೆಸಿದ್ದರು ಎನ್ನಲಾಗ್ತಿದೆ.
ಯಾಸೀನ್ ಮನೆ ಬಳಿ ದೇಶದ್ರೋಹದ ಘೋಷಣೆ, ಕಲ್ಲು ತೂರಾಟ.. 10 ಜನರ ಬಂಧನ - ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಯಾಸೀನ್ ಮಲಿಕ್ಗೆ ಜೈಲು ಶಿಕ್ಷೆ
ದೇಶದ್ರೋಹದ ಘೋಷಣೆಗಳು ಮತ್ತು ಕಲ್ಲು ತೂರಾಟ ನಡೆಸಿದ್ದ ಹತ್ತು ಜನರ ಕಿಡಿಗೇಡಿಗಳನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ.
10 accused arrested in Srinagar
ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸಿದ ಪ್ರಕರಣದಲ್ಲಿ ಯಾಸೀನ್ ಮಲಿಕ್ ದೋಷಿಯಾಗಿದ್ದು, ಬುಧವಾರ ಎನ್ಐಎ ವಿಶೇಷ ಕೋರ್ಟ್ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯ ಶಿಕ್ಷೆ ಪ್ರಮಾಣ ಘೋಷಿಸುವ ಸಂದರ್ಭದಲ್ಲಿ ಆರೋಪಿಗಳು ಯಾಸೀನ್ ಮನೆ ಮುಂದೆ ಜಮಾವಣೆಗೊಂಡು ದಾಂಧಲೆ ನಡೆಸಿದ್ದರು. ಪ್ರಸ್ತುತ ಎಲ್ಲ ಪ್ರದೇಶಗಳಲ್ಲಿ ಶಾಂತ ರೀತಿಯ ವಾತಾವರಣ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಉಗ್ರ ಯಾಸಿನ್ ಮಲಿಕ್ಗೆ ಜೀವಾವಧಿ ಶಿಕ್ಷೆ, ₹10 ಲಕ್ಷ ದಂಡ: ದೆಹಲಿ ಎನ್ಐಎ ಕೋರ್ಟ್ನಿಂದ ಮಹತ್ವದ ತೀರ್ಪು