ಕರ್ನಾಟಕ

karnataka

ETV Bharat / bharat

15 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ 1 ವರ್ಷದ ಬಾಲಕಿ

ಒಂದು ವರ್ಷದ ಬಾಲಕಿ ಆಟವಾಡುತ್ತಾ ಬೋರ್​ವೆಲ್​ ಒಳಗೆ ಬಿದ್ದಿದ್ದಾಳೆ. ಗದ್ದೆಯ ಬೋರ್‌ನಿಂದ ದಿವ್ಯಾಂಶಿ ಅಳುವ ಶಬ್ಧ ಕೇಳಿದೆ. ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಮೊದಲು ಆಕೆಯನ್ನು ಹೊರತರಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

1-year-old-girl-falling-in-deep-borewell-in-chhatarpur
ಬೋರ್‌ವೆಲ್‌ಗೆ ಬಿದ್ದ ಬಾಲಕಿ

By

Published : Dec 16, 2021, 8:11 PM IST

ಛತ್ತರ್‌ಪುರ(ಮಧ್ಯಪ್ರದೇಶ):ನೌಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಲುಗಾಸಿ ಔಟ್‌ಪೋಸ್ಟ್‌ನ ದೌನಿ ಗ್ರಾಮದಲ್ಲಿ ಒಂದು ವರ್ಷದ ಬಾಲಕಿ ನಿಸ್ಕ್ರಿಯಗೊಂಡಿದ್ದ ತೆರೆದ ಬಾವಿಗೆ ಬಿದ್ದಿದ್ದಾಳೆ. ಮಾಹಿತಿ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಸುನೀತಾ ಸುಹಾನಿ, ನೌಗಾಂವ್ ಠಾಣೆ ಪ್ರಭಾರಿ ದೀಪಕ್ ಯಾದವ್ ಸೇರಿದಂತೆ ಪೊಲೀಸ್ ಪಡೆ ಸ್ಥಳಕ್ಕೆ ತಲುಪಿದೆ. ಮಾಹಿತಿ ಪ್ರಕಾರ ರಾಜೇಶ್ ಕುಶ್ವಾಹ ಅವರ ಮಗಳು ದಿವ್ಯಾಂಶಿ ಆಟವಾಡುತ್ತಿದ್ದಾಗ ಬೋರ್‌ಗೆ ಬಿದ್ದಿದ್ದಾಳೆ. ರಕ್ಷಣಾ ತಂಡ ಬಾಲಕಿಯನ್ನು ಹೊರತರುವ ಪ್ರಯತ್ನಕ್ಕೆ ಮುಂದಾಗಿದೆ.

ಒಳಗಿನಿಂದ ಅಳುವ ಸದ್ದು:

ಬಾಲಕಿ ಆಟವಾಡುತ್ತಾ ಎಲ್ಲೋ ಇದ್ದಾಳೆ ಎಂದು ಪೋಷಕರು ತಿಳಿದಿದ್ದರು. ಎಷ್ಟು ಹೊತ್ತಾದರೂ ಬಾರದ ಕಾರಣ ಹುಡುಕಾಟ ಆರಂಭಿಸಿದಾಗ ಗದ್ದೆಯ ಬೋರ್‌ನಿಂದ ದಿವ್ಯಾಂಶಿ ಆಳುವ ಶಬ್ಧ ಕೇಳಿದೆ. ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಮೊದಲು ಆಕೆ ಹೊರತರಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಬಾಲಕಿ ಬಿದ್ದಿರುವ ಬೋರ್​​ವೆಲ್​​ನ​​ ಆಳ 15 ಅಡಿ ಇದೆ.

ಇದನ್ನೂ ಓದಿ: ಅಡುಗೆ ಕೋಣೆ ಕಿಟಕಿ ಮುರಿದು ಸೊಂಡಲಿನಿಂದಲೇ ಆಹಾರ ಹುಡುಕಾಡಿದ ಆನೆ - ವಿಡಿಯೋ

ಆದಷ್ಟು ಬೇಗ ದಿವ್ಯಾಂಶಿ ಅವರನ್ನು ಬೋರ್‌ವೆಲ್‌ನಿಂದ ಹೊರ ತೆಗೆಯಲಾಗುವುದು ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ದಿವ್ಯಾಂಶಿ ಸುರಕ್ಷಿತವಾಗಿದ್ದಾಳೆ ಬೋರ್​​ವೆಲ್ ಹೊರಗೂ ಆಕೆಯ ಅಳುವ ಸದ್ದು ಕೇಳಿಸುತ್ತಿದೆ.

ಸುಮಾರು ಮೂರು ತಿಂಗಳ ಹಿಂದೆ ಕೂಡ ಉಜ್ಜಯಿನಿ ಜಿಲ್ಲಾ ಕೇಂದ್ರದಿಂದ 8 ಕಿಮೀ ದೂರದಲ್ಲಿರುವ ರೂಯಿಗಢದ ಜೋಗಿಖೇಡಿ ಬಳಿ 5 ವರ್ಷದ ಬಾಲಕಿ ಬೋರ್‌ವೆಲ್‌ಗೆ ಬಿದ್ದಿದ್ದಳು. ಗ್ರಾಮಸ್ಥರು ಬಾಲಕಿಯನ್ನು ಬೋರ್‌ವೆಲ್‌ನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು.

ABOUT THE AUTHOR

...view details