ಶಿವಗಂಗಾ(ತಮಿಳುನಾಡು): ಕೊರೊನಾ ಹಿನ್ನೆಲೆ ಈವರೆಗೆ ಪ್ರಾಥಮಿಕ ಶಾಲೆಗಳನ್ನು ತೆರೆಯರಲು ಶಿಕ್ಷಣ ಇಲಾಖೆ ಹಿಂದೇಟು ಹಾಕಿತ್ತು. ಸೋಂಕಿನ ತೀವ್ರತೆ ಕಡಿಮೆಯಾದ ಹಿನ್ನೆಲೆ ಸೋಮವಾರದಿಂದ ತಮಿಳುನಾಡು ರಾಜ್ಯದಲ್ಲಿ 1 ರಿಂದ 8 ನೇ ತರಗತಿಗಳು ಪುನಾರಂಭವಾಗಿವೆ.
ಪ್ರಾಥಮಿಕ ಶಾಲೆಗಳು ಪುನಾರಂಭ... ಚಿಣ್ಣರಿಗೆ ಸ್ವಾಗತ ಕೋರಿದ ಗಜರಾಜ - ಮಕ್ಕಳನ್ನು ಬರ ಮಾಡಿಕೊಂಡ ಆನೆ
ಕರ್ನಾಟಕದಂತೆ ತಮಿಳುನಾಡಿನಲ್ಲೂ ಪ್ರಾಥಮಿಕ ಶಾಲೆಗಳು ಪುನಾರಂಭವಾಗಿದ್ದು, ಚಿಣ್ಣರಿಗೆ ಆನೆಯೊಂದು ಸ್ವಾಗತ ಕೋರಿದೆ.
ನಿನ್ನೆಯಿಂದ 1 ರಿಂದ 8ನೇ ತರಗತಿಯ ಭೌತಿಕ ಪಾಠ-ಪ್ರವಚನಗಳು ಆರಂಭವಾಗಿವೆ. ಬರೋಬ್ಬರಿಗೆ ಒಂದೂವರೆ ವರ್ಷಗಳ ನಂತರ ಭೌತಿಕ ತರಗತಿಗಳು ಪುನಾರಂಭವಾಗಿದ್ದು, ಶಾಲೆಗಳ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಎಚ್ಚರಿಕೆ ನೀಡಿದೆ.
ಶಾಲೆಗೆ ಆಗಮಿಸಿದ ಮಕ್ಕಳನ್ನು ಕಂಡು ಶಿಕ್ಷಕರು ಸಂತಸಗೊಂಡಿದ್ದಾರೆ. ಶಿವಗಂಗಾದಲ್ಲಿ ಶಾಲೆಗಳು ಪುನರಾರಂಭವಾಗುತ್ತಿದ್ದಂತೆ, 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳು ಅರುಲ್ಮಿಗು ಷಣ್ಮುಗನಾಥನ್ ದೇವಸ್ಥಾನದಿಂದ ಆನೆಯ ಮೂಲಕ ಆತ್ಮೀಯ ಸ್ವಾಗತ ಪಡೆದರು. ಗಣಪತಿಯ ಆಶೀರ್ವಾದ ಪಡೆದ ಮಕ್ಕಳು ಸಂತೋಷದಿಂದ ಶಾಲೆಗೆ ಬರುತ್ತಿರುವುದು ಕಂಡುಬಂತು.