ಕರ್ನಾಟಕ

karnataka

ETV Bharat / bharat

1ರೂ.ಗೆ ಲೀಟರ್ ಪೆಟ್ರೋಲ್.. ಆದಿತ್ಯ ಠಾಕ್ರೆ ಬರ್ತಡೇ ಗಿಫ್ಟ್​! - ಪೆಟ್ರೋಲ್ ಬೆಲೆ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ಪುತ್ರ ವಾಹನ ಸವಾರರಿಗೆ ಇಂದು ಬಂಪರ್​ ಆಫರ್​ ನೀಡಿದ್ದಾರೆ. ತಮ್ಮ ಹುಟ್ಟುಹಬ್ಬದ ಪ್ರಯುಕ್ತ 1ರೂ. ಗೆ ಲೀಟರ್​ ಪೆಟ್ರೋಲ್​ ಕೊಡುತ್ತಿದ್ದಾರೆ. ಹೀಗಾಗಿ ಎರಡು ತಾಸು ಸರತಿಯಲ್ಲಿ ಕಾಯ್ದರೂ ಅಡ್ಡಿಯಿಲ್ಲ, 1 ರೂಪಾಯಿಗೆ ಪೆಟ್ರೋಲ್ ಸಿಗುತ್ತಲ್ಲ ಎಂಬ ಆಸೆಯಿಂದ ಜನತೆ ಪೆಟ್ರೋಲ್ ಪಂಪ್ ಮುಂದೆ ಕ್ಯೂ ನಿಂತಿರುವುದು ಕಂಡುಬಂದಿದೆ.

1 liter petrol for 1 rupee; Aditya Thackeray Birthday Gift!
1 ರೂ.ಗೆ ಲೀಟರ್ ಪೆಟ್ರೋಲ್; ಆದಿತ್ಯ ಠಾಕ್ರೆ ಬರ್ತಡೇ ಗಿಫ್ಟ್​!

By

Published : Jun 13, 2021, 6:31 PM IST

ಥಾಣೆ(ಮಹಾರಾಷ್ಟ್ರ): ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಅವರ ಜನ್ಮದಿನಾಚರಣೆಯ ನಿಮಿತ್ತ ಇಂದು ಡೊಂಬಿವಲಿ ಯುವ ಸೇನೆ ವತಿಯಿಂದ ಉಸ್ಮಾ ಪೆಟ್ರೋಲ್ ಪಂಪ್​ನಲ್ಲಿ 1 ರೂಪಾಯಿಗೆ 1 ಲೀಟರ್​ ಪೆಟ್ರೋಲ್ ನೀಡಲಾಯಿತು. 1 ರೂಪಾಯಿಗೆ ಒಂದು ಲೀಟರ್​ ಪೆಟ್ರೋಲ್ ಸಿಗುತ್ತಿರುವುದು ಗೊತ್ತಾಗುತ್ತಿದ್ದಂತೆ ಬೆಳಗ್ಗೆಯಿಂದಲೇ ಪಂಪ್​ ಎದುರು ಭಾರಿ ಉದ್ದನೆಯ ಕ್ಯೂ ನಿರ್ಮಾಣವಾಗಿದೆ.

102 ರೂಪಾಯಿಗೆ ಒಂದು ಲೀಟರ್​ ಬೆಲೆಯ ಪೆಟ್ರೋಲ್ ಕೇವಲ 1 ರೂಪಾಯಿಗ ಸಿಗುತ್ತಿದೆ ಎಂಬ ವಿಷಯ ಈಗ ಇಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ನೀಡುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಏಟು ನೀಡುವ ಶಿವಸೇನೆಯ ಕ್ರಮ ಇದು ಎನ್ನಲಾಗ್ತಿದೆ.

ಪೆಟ್ರೋಲಿಗಾಗಿ ಜನರ ಕ್ಯೂ

ಅಂಬರನಾಥದಲ್ಲಿ 50 ರೂಪಾಯಿಗೆ ಲೀಟರ್​

ಅಂಬರನಾಥ ಪ್ರದೇಶದ ವಿಮ್ಕೊ ನಾಕಾ ಬಳಿಯ ಪೆಟ್ರೋಲ್ ಪಂಪ್​ನಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ 50 ರೂಪಾಯಿಗೆ ಲೀಟರ್ ಪೆಟ್ರೋಲ್ ಮಾರಲಾಯಿತು.

ಪೆಟ್ರೋಲ್ ಹಾಗೂ ಡೀಸೆಲ್​ಗಳ ದರ ಏರಿಕೆ ಕುರಿತು ಶಿವಸೇನೆಯು ಕೇಂದ್ರ ಸರ್ಕಾರದ ವಿರುದ್ಧ ಆಗಾಗ್ಗೆ ವಾಗ್ದಾಳಿ ನಡೆಸುತ್ತಿದೆ. ಈಗ ಸಿಎಂ ಉದ್ಧವ್​ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಹುಟ್ಟುಹಬ್ಬದ ನೆಪದಲ್ಲಿ 1 ರೂಪಾಯಿಗೆ ಲೀಟರ್ ಪೆಟ್ರೋಲ್ ನೀಡುವ ಮೂಲಕ ಶಿವಸೇನೆ ಬಿಜೆಪಿಗೆ ಟಾಂಗ್ ನೀಡುತ್ತಿದೆ.

ಎರಡು ತಾಸು ಸರತಿಯಲ್ಲಿ ಕಾಯ್ದರೂ ಅಡ್ಡಿಯಿಲ್ಲ, 1 ರೂಪಾಯಿಗೆ ಪೆಟ್ರೋಲ್ ಸಿಗುತ್ತಲ್ಲ ಎಂಬ ಆಸೆಯಿಂದ ಜನತೆ ಪೆಟ್ರೋಲ್ ಪಂಪ್ ಮುಂದೆ ಕ್ಯೂ ಹಚ್ಚಿ ನಿಂತಿರುವುದು ಕಂಡುಬಂದಿದೆ.

ABOUT THE AUTHOR

...view details