ಗೋರಖ್‌ಪುರ( ಉತ್ತರಪ್ರದೇಶ): ಇಲ್ಲಿನ ಒಬ್ಬ ವ್ಯಕ್ತಿ ಮತ್ತು ಆತನ ಪುತ್ರನ ಯುಪಿಐ ಅಕೌಂಟ್ ಬಳಸಿ, ಚೀನಾದ ಯುವಕರಿಬ್ಬರು 5 ದಿನಗಳಲ್ಲಿ 1.52 ಕೋಟಿ ರೂಪಾಯಿ ವ್ಯವಹಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು, ತೆಲಂಗಾಣ, ಇಂದೋರ್, ಹೈದರಾಬಾದ್ ಮತ್ತು ಬೆಂಗಳೂರುಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ರಾಜ್ಯಗಳ ನಗರಗಳ ಪೊಲೀಸರು ಗೋರಖ್‌ಪುರದ ಗೋರಖ್‌ನಾಥ್ ರಾಜೇಂದ್ರ ನಗರದಲ್ಲಿರುವ ಆಕ್ಸಿಸ್ ಬ್ಯಾಂಕ್‌ಗೂ ನೋಟಿಸ್ ನೀಡಿದ್ದಾರೆ.
ಪೊಲೀಸರು ಶೀಘ್ರದಲ್ಲೇ ಗೋರಖ್‌ಪುರಕ್ಕೆ ಬಂದು ಖಾತೆದಾರರು, ಖಾತೆ ತೆರೆದ ಸಂಬಂಧಿಕರು ಮತ್ತು ಬ್ಯಾಂಕ್ ಉದ್ಯೋಗಿಗಳನ್ನು ವಿಚಾರಣೆ ನಡೆಸಲಿದ್ದಾರೆ. ಗೋರಖ್‌ಪುರ ಪೊಲೀಸರು ತಾವಾಗಿಯೇ ಇಲ್ಲಿ ಮತ್ತೊಂದು ಎಫ್‌ಐಆರ್ ದಾಖಲಿಸುತ್ತಿಲ್ಲ ಮತ್ತು ಅವರು ಯಾವುದೇ ಹೆಚ್ಚಿನ ತನಿಖೆ ನಡೆಸುತ್ತಿಲ್ಲ. ಬದಲಿಗೆ ಅವರು ಕೇವಲ ತನಿಖೆಯಲ್ಲಿ ಇತರ ರಾಜ್ಯಗಳ ಪೊಲೀಸರೊಂದಿಗೆ ಸಹಕರಿಸುತ್ತಿದ್ದಾರೆ.
ನಗರ ಎಸ್ಪಿ ಕೃಷ್ಣ ಕುಮಾರ್ ವಿಷ್ಣೋಯ್ ನೀಡಿದ ಮಾಹಿತಿ ಹೀಗಿದೆ: ಗೋರಖನಾಥ ಪ್ರದೇಶದ ಶಾಂತಿಪುರಂ ನಿವಾಸಿಗಳಾದ ಸಚ್ಚಿದಾನಂದ ದುಬೆ ಮತ್ತು ಅವರ ಮಗ ಅಖಿಲಾನಂದ್ ಅವರು ತಮ್ಮ ಸಂಬಂಧಿ ಸೋನು ಮಿಶ್ರಾ ಹೇಳಿದಂತೆ ಗೋರಖ್‌ನಾಥ್‌ನ ಆಕ್ಸಿಸ್ ಬ್ಯಾಂಕ್‌ನಲ್ಲಿ ಎರಡು ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ. 25 ಆಗಸ್ಟ್ 2022 ರಿಂದ 30 ಆಗಸ್ಟ್ 2022 ರ ನಡುವೆ, 5 ದಿನಗಳಲ್ಲಿ ಅವರ ಖಾತೆಯಿಂದ 1.54 ಕೋಟಿ ರೂಪಾಯಿಗಳ ವ್ಯವಹಾರವನ್ನು ನೆಟ್ ಬ್ಯಾಂಕಿಂಗ್ ಮೂಲಕ ಮಾಡಲಾಗಿದೆ.