ದಂತೇವಾಡ (ಛತ್ತೀಸ್ಗಢ): ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಎಸ್‌ಯುವಿ ವಾಹನವನ್ನು ಮಾವೋವಾದಿಗಳು ಸ್ಫೋಟಿಸಿದ್ದಾರೆ. ಛತ್ತೀಸ್ಗಢದ ದಂತೇವಾಡದ ಘೋಟಿಯಾ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು,11 ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಂತೇವಾಡದಲ್ಲಿ ನಕ್ಸಲರಿಂದ ವಾಹನ ಸ್ಫೋಟ: ಓರ್ವ ಸಾವು, 11 ಮಂದಿಗೆ ಗಾಯ - ದಂತೇವಾಡ ಸ್ಪೋಟ
ಛತ್ತೀಸ್ಗಢದ ದಂತೇವಾಡದ ಘೋಟಿಯಾ ಗ್ರಾಮದಲ್ಲಿ ಎಸ್‌ಯುವಿ ವಾಹನವನ್ನು ಮಾವೋವಾದಿಗಳು ಸ್ಫೋಟಿಸಿದ್ದು, ಓರ್ವ ಸಾವನ್ನಪ್ಪಿದ್ದರೆ, 11 ಮಂದಿ ಗಾಯಗೊಂಡಿದ್ದಾರೆ.
SUV ಸ್ಫೋಟಿಸಿದ ನಕ್ಸಲರು
ಕಾರಿನಲ್ಲಿ 12 ಮಂದಿ ಗ್ರಾಮಸ್ಥರಿದ್ದರು. ಇವರೆಲ್ಲಾ ನೆರೆಯ ತೆಲಂಗಾಣಕ್ಕೆ ಹೋಗುತ್ತಿದ್ದರು. ಭದ್ರತಾ ಪಡೆಗಳನ್ನು ಗುರಿಯಾಗಿಸಲು ನಕ್ಸಲರು ದಾಳಿ ನಡೆಸಿರಬಹುದೆಂದು ಶಂಕಿಸಲಾಗಿದೆ.
ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.