ಕರ್ನಾಟಕ

karnataka

ETV Bharat / bharat

ದಂಪತಿ ಬಲಿ, 8 ಮುಗ್ದ ಮಕ್ಕಳ ಸುರಕ್ಷತೆಗೆ ಸೋಷಿಯಲ್ ಮೀಡಿಯಾ ಅಭಿಯಾನ: 1 ಕೋಟಿಗೂ ಅಧಿಕ ಹಣ ಸಂಗ್ರಹ - ಸಂತ್ರಸ್ತ ಕುಟುಂಬ

ರಾಜ್ಯಸ್ಥಾನದ ಬಾರ್ಮೆರ್ ಜಿಲ್ಲೆಯ ಸಿಂಧಾರಿ ಎಂಬಲ್ಲಿ ಹಿಂದಿನ ಭಾನುವಾರ ರಸ್ತೆ ಬದಿ ಹೊರಟಿದ್ದ ಜನರ ಮೇಲೆ ಬೊಲೆರೋ ಹರಿದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದು ಜೋಧಪುರದ ಆಸ್ಪತ್ರೆಯಲ್ಲಿ ನಾಲ್ಕು ವರ್ಷದ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೆ. ಇತ್ತ ಮನೆಯಲ್ಲಿ 7 ಮುಗ್ಧ ಹೆಣ್ಣುಮಕ್ಕಳ ಆಕ್ರಂದನ ಮನ ಕಲುಕುವಂತಿದೆ.

Couple's death, 7 innocent girls life critical
ದಂಪತಿ ಸಾವು 7 ಮುಗ್ದ ಹೆಣ್ಣು ಮಕ್ಕಳು ಬೀದಿಗೆ

By

Published : Nov 18, 2022, 8:07 PM IST

Updated : Nov 18, 2022, 8:45 PM IST

ಬಾರ್ಮೆರ್ :ಜಿಲ್ಲೆಯ ಸಿಂಧಾರಿ ಎಂಬಲ್ಲಿ ಹಿಂದಿನ ಭಾನುವಾರ ರಸ್ತೆ ಬದಿ ಹೊರಟಿದ್ದ ಜನರ ಮೇಲೆ ಬೊಲೆರೋ ಹರಿದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದರು. ಇವರ 8 ಮಕ್ಕಳಲ್ಲಿ ನಾಲ್ಕುವರ್ಷದ ಮಗು ತೀವ್ರ ಗಾಯಗೊಂಡು ಜೋಧಪುರದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ನಡೆಸುತ್ತಿದ್ದರೆ. ಇತ್ತ ಮನೆಯಲ್ಲಿ ತಂದೆ ತಾಯಿ ಸಾವಿನಿಂದ ಕಂಗೆಟ್ಟ 7 ಮುಗ್ಧ ಹೆಣ್ಣುಮಕ್ಕಳ ಆಕ್ರಂದನ ಮನಕಲುಕುವಂತಿದೆ.

ಬೊಲೆರೊ ಎಂಬ ಜವರಾಯ ಈ ಕುಟುಂಬದ ಸಂತೋಷವನ್ನೇ ಕಿತ್ತುಕೊಂಡು ಬೀದಿಗೆ ತಂದು ಬಿಟ್ಟಿದೆ. ಅಪಘಾತದಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಕುಟುಂಬದ ಅಕ್ರಂದನಕ್ಕೆ ಸೋಷಿಯಲ್​ ಮೀಡಿಯಾ ಉತ್ತಮ ಕಾರ್ಯ ನಿರ್ವಹಿಸಿದೆ. ಸೊಷಿಯಲ್ ಮೀಡಿಯಾದಲ್ಲಿ ಈ ಅಮಾಯಕ ತಬ್ಬಲಿ ಮಕ್ಕಳಿಗೆ ಸಹಾಯ ಮಾಡುವ ಕುರಿತು ಅಭಿಯಾನ ಶುರು ಮಾಡಿ, ಕುಟುಂಬದ ಗುಂಪು ನಿಧಿ(crowd funding) ಮೂಲಕ 1 ಕೋಟಿಗೂ ಅಧಿಕ ಹಣ ಸಂಗ್ರಹಿಸಿ ನೆರವಾಗಿದೆ.

ಬಾರ್ಮೆರ್ ಜಿಲ್ಲೆಯ ಸಿಂಧಾರಿ ಎಂಬಲ್ಲಿ ನಾಲ್ಕು ದಿನದ ಹಿಂದೆ ರಸ್ತೆ ಮೇಲೆ ಹೊರಟಿದ್ದ ಜನರ ಮೇಲೆ ಬೊಲೆರೋ ಹರಿದು ಈ ಸಾವಿನ ದುದೈವದ ದುರಂತ ಸೃಷ್ಟಿಸಿದೆ. ಈ ಕುಟುಂಬದ ಬೆನ್ನೆಲುಬು ಖೇತಾರಾಮ್ ಹಾಗೂ ಆತನ ಪತ್ನಿ ಸ್ಥಳದಲ್ಲೇ ಸಾವಿಗೀಡಾದ್ದರೆ, 4 ವರ್ಷದ ಮಗ ತೀವ್ರ ಗಾಯಗೊಂಡಿತು.

ಗುರುವಾರ ಬಾರ್ಮರ್ ಜಿಲ್ಲಾಧಿಕಾರಿ ಲೋಕಬಂಧು, ಸಂತ್ರಸ್ತ ಕುಟುಂಬದ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಸಮಾಜ ಸೇವಕರು, ಭಾಮಾಶಾ, ಬಾರ್ಮರ್ ಸೇರಿದಂತೆ ದೇಶಾದ್ಯಂತ ಮಕ್ಕಳಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಈ ವರೆಗೆ ಗುಂಪು ನಿಧಿ ಮೂಲಕ ಕೋಟಿಗೂ ಹೆಚ್ಚು ಹಣ ಹರಿದು ಬಂದಿದೆ.

ಇಂಥ ಪರಿಸ್ಥಿತಿಯಲ್ಲಿ ಸಂತ್ರಸ್ತರ ಕುಟುಂಬದ ಬ್ಯಾಂಕ್ ಖಾತೆಗೆ ಕ್ರೌಡ್ ಫಂಡಿಂಗ್​​​ದಿಂದ ಮೊತ್ತ ಸುರಕ್ಷಿತವಾಗಿಡಲು, ಬ್ಯಾಂಕಿಂಗ್ ಅಧಿಕಾರಿಗಳು ವಿವಿಧ ಅವಧಿಯ ಎಫ್‌ಡಿಗಳನ್ನು ಹುಡುಗಿಯರ ಹೆಸರಿನಲ್ಲಿ ಜಮೆ ಮಾಡಬೇಕು ಎಂದು ಸೂಚಿಸಿದ್ದಾರೆ. ಗುರುವಾರ ಅರಣ್ಯ ಮತ್ತು ಪರಿಸರ ಸಚಿವ ಹೇಮರಾಮ್ ಚೌಧರಿ ಅವರು ಜೋಧ್‌ಪುರದ ಮಥುರಾದಾಸ್ ಮಾಥುರ್ ಆಸ್ಪತ್ರೆಗೆ ಆಗಮಿಸಿ ಆಸ್ಪತ್ರೆಯಲ್ಲಿ ದಾಖಲಾದ ಅಮಾಯಕ ಜಸರಾಜ್ ಮತ್ತು ಬದ್ರರಾಮ್ ಅವರ ಆರೋಗ್ಯದ ಬಗ್ಗೆ ವೈದ್ಯರಲ್ಲಿ ವಿಚಾರಿಸಿದರು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.

ಈ ಹೆಣ್ಣುಮಕ್ಕಳಿಗೆ ಸಹಾಯ ಮಾಡಲು ಅಭಿಯಾನ ಮೂಲಕ ದೇಶಾದ್ಯಂತ ಜನರು ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಆದರೆ ಬರುತ್ತಿದ್ದಾರೆ. ಊರಿನವರೆಲ್ಲ ಸೇರಿ ಹೆಣ್ಣುಮಕ್ಕಳನ್ನುಚೆನ್ನಾಗಿ ನೋಡಿಕೊಳ್ಳುವುದಕ್ಕೆ ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ:ಕಾಡಿನಲ್ಲಿ ನಗ್ನ ಸ್ಥಿತಿಯಲ್ಲಿ ಯುವಕ - ಯುವತಿಯ ಶವ ಪತ್ತೆ

Last Updated : Nov 18, 2022, 8:45 PM IST

ABOUT THE AUTHOR

...view details