ಬೀಜಿಂಗ್: ವಿಶ್ವದ ಅತ್ಯಂತ ಜನಪ್ರಿಯ ವಿಡಿಯೋ ಗೇಮ್ಗಳಲ್ಲಿ ಒಂದಾದ PUBG ಚೀನಾ ಹೊರತುಪಡಿಸಿ ಪ್ರಪಂಚದಾದ್ಯಂತ ಒಂದು ಶತಕೋಟಿ ಡೌನ್ಲೋಡ್ಗಳನ್ನೂ ದಾಟಿದೆ.
ಈ ಗೇಮ್ ವಿಶ್ವದಾದ್ಯಂತದ ಅತ್ಯಂತ ಹೆಚ್ಚು ಜನಪ್ರಿಯ ಆಟಗಳಲ್ಲಿ ಒಂದಾಗಿದ್ದು, ಇಷ್ಟೊಂದು ಡೌನ್ಲೋಡ್ ಆಗುವ ಮೂಲಕ ಹೊಸ ಮೈಲುಗಲ್ಲನ್ನು ಸಾಧಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಂಪನಿ, ಚೀನಾದ ಹೊರಗೆ 1 ಬಿಲಿಯನ್ ಡೌನ್ಲೋಡ್ಗಳನ್ನು ದಾಟಲು ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದೆ.
ಈ ಡೌನ್ಲೋಡ್ಗಳಲ್ಲಿ ಇದು ಮೂರನೇ ಸ್ಥಾನದಲ್ಲಿದ್ದು, ಅಗ್ರ ಎರಡು ಸ್ಥಾನದಲ್ಲಿ ಕಿಲೋ ಗೇಮ್ಸ್ನ ಸಬ್ವೇ ಸರ್ಫರ್ಸ್ ಮತ್ತು ಕಿಂಗ್ ಡಿಜಿಟಲ್ ಎಂಟರ್ಟೈನ್ಮೆಂಟ್ನ ಕ್ಯಾಂಡಿ ಕ್ರಷ್ ಇವೆ. ಕಂಪನಿಯು ತನ್ನ ಆನ್ಲೈನ್ ಗೇಮ್ ಬಗ್ಗೆ ವರದಿ ಬಿಡುಗಡೆ ಮಾಡುವಾಗ ಈ ಮಾಹಿತಿ ನೀಡಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ಆದಾಯವು ಶೇಕಡಾ 29 ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ. ಅದೇ ತ್ರೈಮಾಸಿಕದಲ್ಲಿಎರಡು-ಹಿಟ್ ಆಟಗಳಾದ ಹಾನರ್ ಆಫ್ ಕಿಂಗ್ಸ್ ಮತ್ತು ಈ ಪಬ್ಜಿ ಗೇಮ್ ಕ್ರಮವಾಗಿ ಚೀನಾ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಯಾಂಕಗಳನ್ನು ಮುಂದುವರೆಸಿವೆ ಎಂದು ಸಂಸ್ಥೆ ಉಲ್ಲೇಖಿಸಿದೆ.