ಕರ್ನಾಟಕ

karnataka

ETV Bharat / bharat

ರಾಂಚಿ: ಉದ್ಯಮಿ ಕಾರು ಅಡ್ಡಗಟ್ಟಿ ₹1.25ಕೋಟಿ ದರೋಡೆ - ranchi Crime

ಉದ್ಯಮಿ ನಿಕೇಶ್ ಮಿಶ್ರಾ ಕಾರು ಅಡ್ಡಗಟ್ಟಿದ ದರೋಡೆಕೋರರ ಗುಂಪು ಸುಮಾರು 1.25 ಕೋಟಿ ರೂ. ದೋಚಿರುವ ಘಟನೆ ರಾಂಚಿಯಲ್ಲಿ ನಡೆದಿದೆ.

ranchi
ರಾಂಚಿ ದರೋಡೆ

By

Published : Apr 12, 2021, 10:09 AM IST

ರಾಂಚಿ: ಉದ್ಯಮಿವೋರ್ವರು ತಮ್ಮವ್ಯವಹಾರ ಸಂಬಂಧ ಬೆಳಗ್ಗೆ ಕಾರಿನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿದ ದರೋಡೆಕೋರರು ಸುಮಾರು 1.25 ಕೋಟಿ ರೂ. ದರೋಡೆ ಮಾಡಿದ್ದಾರೆ.

ರಾಂಚಿ ಮತ್ತು ಖುಂಟಿಯಲ್ಲಿ ವ್ಯವಹಾರವನ್ನು ನಡೆಸುತ್ತಿರುವ ಉದ್ಯಮಿ ನಿಕೇಶ್ ಮಿಶ್ರಾ ಇಂದು 5.30ರ ಸುಮಾರಿಗೆ ತನ್ನ ಮೂವರು ಸಹೋದ್ಯೋಗಿಗಳೊಂದಿಗೆ ಜಗನ್ನಾಥಪುರ ಪ್ರದೇಶದ ಮೂಲಕ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ದರೋಡೆಕೋರರ ಗುಂಪೊಂದು ಕಾರನ್ನು ಅಡ್ಡಗಟ್ಟಿ 1.25 ಕೋಟಿ ರೂ.ಯನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.

ಪ್ರಕರಣವು ರಾಂಚಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details