ಮೇಷ
ಇಂದು ನಿಮಗೆ ವಿದೇಶಿ ವಸ್ತುಗಳ ಮೇಲೆ ಕಣ್ಣಿರುತ್ತದೆ. ಈ ವಿಷಯಗಳಲ್ಲಿ ನೀವು ವ್ಯಾಪಾರ ಪ್ರಾರಂಭಿಸುವ ಸಾಧ್ಯತೆಯೂ ಇರುತ್ತದೆ. ಆದಾಗ್ಯೂ, ನೀವು ಅದರ ಕುರಿತು ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಆದರೆ ನಿಮ್ಮ ಆಯ್ಕೆಯನ್ನು ಮುಕ್ತವಾಗಿರಿಸಿಕೊಳ್ಳುತ್ತೀರಿ.
ವೃಷಭ
ನೀವು ಉದ್ಯೋಗದಲ್ಲಿ ಸಾಕಷ್ಟು ಕೆಲಸಗಳಿಂದ ಒತ್ತಡಕ್ಕೆ ಸಿಲುಕುತ್ತೀರಿ. ಆದರೆ, ನೀವು ತುಂಬಾ ಕಾಳಜಿ ವಹಿಸುವವರೊಂದಿಗೆ ಹೊರಗಡೆ ಸುತ್ತಾಡಿ ಆನಂದಿಸಲು ನಿಮಗೆ ನೆರವಾಗುತ್ತದೆ. ನೀವು ಎಲ್ಲವನ್ನೂ ಮರೆತು ಆನಂದಿಸುವುದು ಸೂಕ್ತ, ಅದು ನಿಮಗೆ ನಿಜಕ್ಕೂ ಅಗತ್ಯವಾಗಿದೆ.
ಮಿಥುನ
ಯಾವುದೋ ಒಂದು ಕಾರಣಕ್ಕೆ ನಿಮ್ಮ ಮನಸ್ಸು ವಿಚಲಿತ ಮತ್ತು ಆತಂಕದಿಂದ ಕೂಡಿರುತ್ತದೆ. ನಿಮ್ಮ ಆತಂಕಗಳನ್ನು ವ್ಯಕ್ತಪಡಿಸಲು ನೀವು ಅಶಕ್ತರಾಗುತ್ತೀರಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ನಿಮ್ಮ ಸಂಗಾತಿಯ ಪ್ರೀತಿಯನ್ನು ಗಳಿಸುವಲ್ಲಿ ಶಕ್ತರಾಗುತ್ತೀರಿ. ಹಳೆಯದನ್ನು ಮರೆತು ವಿಶ್ವಾಸದಿಂದ ಮುಂದುವರೆಯಲು ಪ್ರಯತ್ನಿಸಿ.
ಕರ್ಕಾಟಕ
ಕುಟುಂಬ ಸದಸ್ಯರಿಂದ ಬೆಂಬಲದ ಕೊರತೆ ನಿಮ್ಮ ಪ್ರಯತ್ನಗಳನ್ನು ವಿಫಲಗೊಳಿಸುತ್ತದೆ. ಮಕ್ಕಳು ಕೂಡಾ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ಕುಟುಂಬದಲ್ಲಿ ನಿರ್ಲಕ್ಷ್ಯ ಅಥವಾ ಭಿನ್ನಾಭಿಪ್ರಾಯ ಉಂಟಾಗಬಹುದು. ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ. ಪರಿಸ್ಥಿತಿಗಳನ್ನು ಕಿರುನಗೆಯಿಂದ ನಿಭಾಯಿಸಿ.
ಸಿಂಹ
ಇಂದು ನಿಮ್ಮ ಆತ್ಮವಿಶ್ವಾಸ ಅತ್ಯಂತ ಹೆಚ್ಚಾಗಿದೆ. ನೀವು ಕೆಲಸದಲ್ಲಿ ಬಹಳ ಮಹತ್ವದ ನಿರ್ಧಾರಗಳನ್ನು ದೃಢವಾಗಿ ತೆಗೆದುಕೊಳ್ಳುತ್ತೀರಿ. ಇಂದು ಕೆಲಸ ಸುಸೂತ್ರವಾಗುವುದನ್ನು ಕಾಣುತ್ತೀರಿ ಮತ್ತು ಯಶಸ್ಸು ನಿಮ್ಮನ್ನು ಅನುಸರಿಸುತ್ತದೆ.
ಕನ್ಯಾ
ಇಂದು ಕೊಂಚ ಬಿಡುವು ಪಡೆದು ನಿಮ್ಮ ಕಡೆ ಗಮನ ನೀಡಿ. ಕೆಲಸದ ಸ್ಥಳದಲ್ಲಿ ಘರ್ಷಣೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ನೀವು ಎಚ್ಚರಿಕೆಯಿಂದ ಇರುವುದು ಅಗತ್ಯ, ಮತ್ತು ವಿಷಯಗಳು ಬಹಳ ಕಠಿಣವಾಗುವುದನ್ನು ತಡೆಯಲು ಪ್ರಯತ್ನಿಸಿ. ಪ್ರೀತಿಯ ವಿಷಯದಲ್ಲಿ, ಹೊಸ ಪ್ರಣಯವೊಂದು ರೂಪುಗೊಳ್ಳಬಹುದು.
ತುಲಾ
ಬಾಕಿ ಇರುವ ಯಾವುದೇ ಕಾನೂನು ಸಮಸ್ಯೆಗಳು ಇಂದು ನ್ಯಾಯಾಲಯದಲ್ಲಿ ಅಥವಾ ನ್ಯಾಯಾಲಯದ ಹೊರಗಡೆ ಪರಿಹಾರವಾಗಬಹುದು. ನಿಮ್ಮ ಕಾರ್ಯದೊತ್ತಡ ಇಂದು ಕಡಿಮೆಯಾಗಲಿದೆ, ಮತ್ತು ನೀವು ಕೆಲ ಸಮಸ್ಯಾತ್ಮಕ ಸನ್ನಿವೇಶಗಳಿಂದ ದೂರ ಹೋಗಲು ಶಕ್ತರಾಗುತ್ತೀರಿ.
ವೃಶ್ಚಿಕ
ಇಂದು ನೀವು ನಿಮ್ಮ ಕೆಲಸದಲ್ಲಿ ಮುಳುಗಿಹೋಗುತ್ತೀರಿ. ಹಗಲಿನ ವೇಳೆ, ನೀವು ಕರ್ತವ್ಯಗಳು ಮತ್ತು ಜವಾಬ್ದಾರಿಗಳಲ್ಲಿ ತುಂಬಿರುತ್ತೀರಿ. ಆದರೆ, ಸಂಜೆ ವೇಳೆಗೆ ಎಂದಿನಂತೆ ಉತ್ಸಾಹದಲ್ಲಿದ್ದು, ನಿಮ್ಮ ಮಿತ್ರರೊಂದಿಗೆ ಹೊರಗಡೆ ಹೋಗಿ ಆರಾಮವಾಗಿ ಕಾಲ ಕಳೆಯಿರಿ.
ಧನು
ನೀವು ವಿವಾದದಲ್ಲಿ ಸಿಲುಕುವ ಸಾಧ್ಯತೆ ಇದೆ. ನೀವು ಮನಸ್ಸಿಗೆ ಬಂದಂತೆ ನಿಮಗೆ ಸಲಹೆ ನೀಡುವ ಜನರಿಂದ ದೂರ ಉಳಿಯುವುದು ಉತ್ತಮ. ಎಲ್ಲ ಅಂಶಗಳಿಗೂ ನೀವು ತಾಳ್ಮೆಯಿಂದ ಕಿವಿಗೊಟ್ಟರೆ ಚಂಡಮಾರುತ ತಣ್ಣಗಾಗುತ್ತದೆ ಮತ್ತು ಅವರ ಅಭಿಪ್ರಾಯಗಳನ್ನು ಸ್ವೀಕರಿಸಲು ಪ್ರಯತ್ನಿಸಿ.
ಮಕರ
ನಿಮ್ಮ ದಿನಚರಿ ಅತ್ಯಂತ ಒತ್ತಡದಲ್ಲಿದೆ ಮತ್ತು ನೀವು ದಿನದ ಅಂತ್ಯಕ್ಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುತ್ತೀರಿ. ಹೊರಗಡೆ ಸ್ಪರ್ಧಾತ್ಮಕ ಜಗತ್ತು ಇದೆ, ಆದ್ದರಿಂದ ಅತ್ಯಂತ ಜಾಗರೂಕತೆ ವಹಿಸಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಕಾಲೆಳೆಯಲು ಒಂದು ಸಣ್ಣ ಅವಕಾಶ ದೊರೆತರೂ ಸಾಕು ಎಂದು ಕಾಯುತ್ತಿದ್ದಾರೆ. ಜಾಣ್ಮೆಯಿಂದಿರಿ ಮತ್ತು ನಿಮ್ಮನ್ನು ಕೆಳಗೆ ತಳ್ಳಲು ಪ್ರಯತ್ನಿಸಿದವರಿಗೆ ಎಲ್ಲವನ್ನೂ ಹಿಂದಿರುಗಿಸಿ ನೀಡಿ.
ಕುಂಭ
ಇಂದು ನೀವು ವಿದೇಶದಿಂದ ಶುಭಸುದ್ದಿ ಕೇಳುತ್ತೀರಿ. ಈ ದಿನ ನಿಮಗೆ ಧನಾತ್ಮಕವಾಗಿರುತ್ತದೆ ಮತ್ತು ಇಡೀ ದಿನ ಹಾಗೇ ಉಳಿಯುತ್ತದೆ. ನೀವು ಆನಂದಿಸುವ ಮನಸ್ಥಿತಿಯಲ್ಲಿದ್ದೀರಿ ಮತ್ತು ನಿಮ್ಮನ್ನು ಸೇರುವ ಪ್ರತಿಯೊಬ್ಬರೂ ನಿಮ್ಮೊಂದಿಗೆ ಆನಂದಿಸುತ್ತಾರೆ.
ಮೀನ
ಗ್ರಹಗಳು ಪರಿಪೂರ್ಣವಾಗಿ ಇರುವುದರಿಂದ ಕೆಲಸ ಮಾಡುವವರಿಗೆ ಈ ದಿನ ಅತ್ಯುತ್ತಮವಾಗಿದೆ. ಕೆಲಸದಲ್ಲಿ ಇಂದು ನೀವು ಎಲ್ಲಾ ನಿರೀಕ್ಷಿತ ಫಲಿತಾಂಶಗಳನ್ನು ಸಾಧಿಸುತ್ತೀರಿ. ವಿದೇಶಗಳಲ್ಲಿ ಮತ್ತಷ್ಟು ಅಧ್ಯಯನಕ್ಕಾಗಿ ಎದುರು ನೋಡುತ್ತಿರುವವರು ಕೂಡಾ ಪ್ರಗತಿ ಕಾಣುತ್ತಾರೆ ಮತ್ತು ಅವರ ಕನಸುಗಳನ್ನು ಈಡೇರಿಸಿಕೊಳ್ಳಲು ಹತ್ತಿರವಾಗುತ್ತಾರೆ.