ಕರ್ನಾಟಕ

karnataka

ETV Bharat / bharat

ವಾಯುಪುತ್ರನ ಈ ದಿನ ನಿಮ್ಮ ರಾಶಿಫಲ ಹೇಗಿರಲಿದೆ..? - 06 March 2021 Etv Bharat horoscope

ಶನಿವಾರದ ರಾಶಿಭವಿಷ್ಯ

06 March 2021 Saturday Astrology
ಶನಿವಾರದ ರಾಶಿಭವಿಷ್ಯ

By

Published : Mar 6, 2021, 5:01 AM IST

ಮೇಷ

ಇಂದು ನೀವು ಆಳವಾಗಿ ಅತೀಂದ್ರಿಯ ಮತ್ತು ಅತಿಮಾನುಷ ವಿಷಯಗಳತ್ತ ಆಸಕ್ತಿ ವಹಿಸುತ್ತೀರಿ, ನೀವು ಅದಕ್ಕೆ ಸಂಬಂಧಿಸಿ ಏನೋ ಒಂದು ಮಾಡಬಹುದು. ನೀವು ಈ ವಿಷಯಗಳ್ನು ವಿವರವಾಗಿ ಚರ್ಚಿಸುವ ಪುಸ್ತಕಗಳ ಮೇಲೆ ಖರ್ಚು ಮಾಡಲೂಬಹುದು. ನೀವು ಅಂತಹ ಜ್ಞಾನವನ್ನು ಶಾಂತಿಯುತ ಕಾರಣಗಳಿಗೆ ಮಾತ್ರ ಬಳಸಬೇಕು.

ವೃಷಭ

ಇಂದು ನಿಮ್ಮನ್ನು ಪ್ರಚೋದಿಸುವ ಮತ್ತು ನಿಮಗೆ ಸಿಟ್ಟು ಬರಿಸುವ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ನೀವು ಪ್ರತೀಕಾರ ತೆಗೆದುಕೊಳ್ಳದೇ ಇರುವುದು ಉತ್ತಮ. ಮತ್ತು ನಿಮ್ಮ ಒಳ್ಳೆಯ ಸ್ವಭಾವಕ್ಕೆ ಹೊಂದಿಕೊಳ್ಳದ ವಿಷಯಗಳನ್ನು ಮಾಡದಿರಿ. ಶಾಂತ ಮತ್ತು ಕ್ಷೋಭೆರಹಿತವಾಗಿರಿ. ನಿಮ್ಮ ಒಳ್ಳೆಯ ಸ್ವಭಾವಕ್ಕೆ ತಕ್ಕಂತೆ ಪ್ರತಿಕ್ರಿಯಿಸಿ ಮತ್ತು ವರ್ತಿಸಿ.

ಮಿಥುನ

ಮೇಲಧಿಕಾರಿಗಳು ನಿಮಗೆ ಹೊಸ ಜವಾಬ್ದಾರಿಗಳನ್ನು ನೀಡುತ್ತಾರೆ. ನಿಮ್ಮ ಹಗಲಿನ ಸಂಕಷ್ಟ, ದಿನದ ಕೆಲಸದ ಅಂತ್ಯದಲ್ಲಿ ನೀವು ಅತ್ಯುತ್ತಮ ಫಲಿತಾಂಶಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವುದರಿಂದ ಸಂತೋಷವಾಗಿ ಬದಲಾಗುತ್ತದೆ. ನೀವು ಟೆಂಡರ್​​​​​​​​​​​​​ಗಳ ಹರಾಜನ್ನು ಕೆಲ ದಿನಗಳು ತಡ ಮಾಡಿದರೆ ಒಳಿತು.

ಕರ್ಕಾಟಕ

ಇಂದು ಅತ್ಯಂತ ದಿಢೀರ್ ಮತ್ತು ಸ್ವಾಭಾವಿಕವಾಗಿರುತ್ತೀರಿ. ನಿಮ್ಮ ಋಣಾತ್ಮಕ ಆಲೋಚನೆಗಳು ಮತ್ತು ನಂಬಿಕೆಗಳಿಂದ ಹೊರಬರುವುದು ಅಗತ್ಯ ಮತ್ತು ಕೈಯಲ್ಲಿರುವ ವಿಷಯಗಳ ಜವಾಬ್ದಾರಿ ತೆಗೆದುಕೊಳ್ಳಲು ಪ್ರಾರಂಭಿಸಬೇಕು. ಅಲ್ಲದೆ ಅತಿಯಾಗಿ ಯೋಚನೆ ಮಾಡದೆ ಕೆಲಸ ಪ್ರಾರಂಭಿಸಿ.

ಸಿಂಹ

ನಿಮ್ಮ ಇಡೀ ದಿನ ಕೆಲಸದಲ್ಲಿ ಕಳೆಯುತ್ತದೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರು ತಮ್ಮ ಮೇಲಧಿಕಾರಿಗಳಿಂದ ಎತ್ತರದ ನಿರೀಕ್ಷೆಗಳನ್ನು ಪೂರೈಸಬೇಕು. ಗೃಹಿಣಿಯರು ತಮ್ಮ ದೈನಂದಿನ ಕಾರ್ಯಗಳಲ್ಲದೆ ಇತರೆ ಕೆಲಸಗಳನ್ನೂ ನಿರ್ವಹಿಸಬೇಕು. ಇದು ನಿಮಗೆ ಪ್ರಮುಖವಾದ ದಿನ.

ಕನ್ಯಾ

ಕುಟುಂಬದ ಆತ್ಮೀಯ ಸದಸ್ಯರು ಮತ್ತು ಮಿತ್ರರು ಇಂದು ನಿಮಗಾಗಿ ಸಮಯ ನೀಡುತ್ತಾರೆ. ಪರೀಕ್ಷೆಗಳು ಹತ್ತಿರದಲ್ಲಿರುವುದರಿಂದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಗಮನ ನೀಡಬೇಕು, ಮತ್ತು ಅವರು ಅಧ್ಯಯನ ಮತ್ತು ಬಿಡುವಿನ ನಡುವೆ ಸಮತೋಲನ ಕಾಪಾಡಿಕೊಳ್ಳಲು ಕಲಿಯಬೇಕು. ಇಂದು ಆಸ್ತಿಯಲ್ಲಿ ಹೂಡಿಕೆ ಮಾಡಲು ಒಳ್ಳೆಯ ದಿನ.

ತುಲಾ

ಇಂದು ಜನರು ಹೇಳುವ ಪ್ರತಿಯೊಂದನ್ನೂ ಕಿಂಚಿತ್ತೂ ವಿಮರ್ಶೆ ಮಾಡದೆ ಒಪ್ಪಿಕೊಳ್ಳುತ್ತೀರಿ. ನಿಮ್ಮ ಸುತ್ತಲೂ ಇರುವ ಎಲ್ಲಾ ವಸ್ತುಗಳ ಕುರಿತು ನೀವು ಅಚ್ಚರಿಗೊಳ್ಳುವ ದಿನಗಳಲ್ಲಿ ಇದೂ ಒಂದು. ಅಂತಹ ಅನುಕೂಲಕರ ವಿಧಾನ ನಿಮಗೆ ನಿಮ್ಮ ದೃಷ್ಟಿಕೋನಗಳಲ್ಲಿ ವಿವೇಕದಿಂದಿರಲು ಮತ್ತು ನಿಮ್ಮ ದಾರಿಯಲ್ಲಿ ಸಂವೇದನಾಶೀಲವಾಗಿರಲು ಸನ್ನದ್ಧರಾಗಿಸುತ್ತದೆ.

ವೃಶ್ಚಿಕ

ನಿಮ್ಮ ಭಾವನೆಗಳನ್ನು ನಿಗ್ರಹಿಸಲು ಸಾಧ್ಯವಿಲ್ಲದೇ ಇರಬಹುದು, ಮತ್ತು ನೀವು ಪ್ರಯತ್ನಿಸುವುದೂ ಒಳ್ಳೆಯದಲ್ಲ. ಮುಖ್ಯವಾಗಿ ನಿಮ್ಮನ್ನು ತಪ್ಪಾಗಿ ತೀರ್ಮಾನಿಸುವ ಜನರು ಇರುವಾಗ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವಾಗ ಎಚ್ಚರದಲ್ಲಿರಬೇಕು.

ಧನು

ನಿಮ್ಮ ಶಕ್ತಿಯ ಮಟ್ಟ ಮತ್ತು ಉತ್ಸಾಹ ನಿಮ್ಮ ಸಾಧಾರಣ ನೀರಸ ದಿನಚರಿಯಿಂದ ಕಳೆದುಹೋಗಿದೆ. ದುರಾದೃಷ್ಟವಶಾತ್, ನಿಮ್ಮ ತಾರೆಗಳು ಕೂಡಾ ಇಂದು ಕಾಳಜಿ ಹೊಂದಿಲ್ಲ, ಮತ್ತು ನೀವು ಉಜ್ವಲವಾಗಲು ಏನೂ ಉಳಿದಿಲ್ಲ. ಈ ದಿನ ಸರಾಗವಾಗಿ ಮುಗಿಯಲಿ ಮತ್ತು ಒಳ್ಳೆಯ ನಾಳೆಗಾಗಿ ಕಾಯಿರಿ.

ಮಕರ

ನೀವು ಒಳ್ಳೆಯ ಸಂವಹನ ಕೌಶಲ್ಯ ಹೊಂದಿದ್ದೀರಿ. ಇದು ನಿಮ್ಮ ಸುತ್ತಲೂ ಇರುವ ಅತ್ಯಂತ ಹಠದ ಸ್ವಭಾವದವರನ್ನು ಮನ ಒಲಿಸಲು ನೆರವಾಗುತ್ತದೆ. ಆದಾಗ್ಯೂ, ನೀವು ಈ ಪ್ರತಿಭೆಯನ್ನು ಮತ್ತೊಮ್ಮೆ ಸಾಣೆ ಹಿಡಿಯಬೇಕು. ಇಂದು ನೀವು ಹುಡುಕುತ್ತಿರುವ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ.

ಕುಂಭ

ಕೆಲವೊಮ್ಮೆ ನೀವು ಉಸುಕಿನಲ್ಲಿ ಸಿಲುಕಿಕೊಂಡಂತೆ ಭಾವಿಸುತ್ತೀರಿ. ಮತ್ತು ಅದರಿಂದ ನಿಮ್ಮನ್ನು ಹೊರಗೆಳೆಯಲು ಯಾರೂ ಇಲ್ಲ. ಆದಾಗ್ಯೂ, ಸ್ವತಂತ್ರ ಕುಂಭ ರಾಶಿಯವರು ಏಕಾಂಗಿಯಾಗಿ ಪ್ರತಿಕೂಲತೆಯನ್ನು ಎದುರಿಸಲು ಶಕ್ತರು. ಅಲ್ಲದೆ ಈ ಪ್ರವೃತ್ತಿ ನಿಮಗೆ ಇಂದಿಗೂ ಅನುಕೂಲಕರವಾಗಿದೆ .

ಮೀನ

ನೀವು ಪ್ರಯಾಣ ಮಾಡುವ ಬಯಕೆಯಲ್ಲಿರುತ್ತೀರಿ ಮತ್ತು ಅದಕ್ಕೆ ಕಾರಣ ಹುಡುಕುತ್ತೀರಿ. ಆದ್ದರಿಂದ ಮನಸ್ಸಿಗೆ ಇಚ್ಛಿಸಿದಂತೆ ನೀವು ಬ್ಯಾಗ್ ಸಿದ್ಧಪಡಿಸಿಕೊಂಡು ಪ್ರಯಾಣ ಹೊರಟರೆ ಆಶ್ಚರ್ಯವೇ ಇಲ್ಲ. ಜೀವನೋಪಾಯ ಗಳಿಸುವ ದೈನಂದಿನ ಒತ್ತಡಗಳಲ್ಲಿ ಇದು ನಿಮಗೆ ಅತ್ಯಂತ ಅಗತ್ಯವಾದ ಬಿಡುವು ಕೂಡಾ ಆಗಿದೆ.

ABOUT THE AUTHOR

...view details