ನವದೆಹಲಿ: ಸಕ್ರೀಯ ಕೋವಿಡ್ -19 ರೋಗಿಗಳಲ್ಲಿ ಶೇ 0.46 ರಷ್ಟು ಜನರು ವೆಂಟಿಲೇಟರ್‌ಗಳಲ್ಲಿದ್ದಾರೆ. ಶೇಕಡಾ 2.31 ರಷ್ಟು ಐಸಿಯುನಲ್ಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
ನಮ್ಮಷ್ಟು ವೇಗವಾಗಿ ಯಾವ ದೇಶವು ವ್ಯಾಕ್ಸಿನೇಷನ್ ಮಾಡುತ್ತಿಲ್ಲ: ಸಚಿವ ಡಾ.ಹರ್ಷವರ್ಧನ್
ದೇಶದಲ್ಲಿ ಇಂದು ಹೊಸದಾಗಿ 1,31,968 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಆರೋಗ್ಯಧಿಕಾರಿಗಳ ಸಭೆಯಲ್ಲಿ ಮಾತನಾಡಿರುವ ಸಚಿವರು, ಶೇ 4.51ರಷ್ಟು ಜನ ಆಕ್ಸಿಜನ್ ಬೆಡ್ನಲ್ಲಿದ್ದಾರೆ. ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಪ್ರಮಾಣ 1.28 ರಷ್ಟಿದೆ. ಕಳೆದ ಏಳು ದಿನಗಳಲ್ಲಿ 149 ಜಿಲ್ಲೆಗಳಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ಇತ್ತೀಚಿನ ಅಂಕಿ- ಅಂಶಗಳು 9,43,34,262 ಡೋಸೆಜ್ಗಳನ್ನು ದೇಶದ ಜನರಿಗೆ ನೀಡಲಾಗಿದೆ. "ಕಳೆದ 24 ಗಂಟೆಗಳಲ್ಲಿ ನಾವು 36,91,511 ಡೋಸ್‌ಗಳನ್ನು ನೀಡಿದ್ದೇವೆ. ಕಳೆದ ವಾರ ನಾವು ಒಂದು ದಿನಕ್ಕೆ 43 ಲಕ್ಷ ಡೋಸ್‌ಗಳನ್ನು ಸಹ ನೀಡಿದ್ದೇವೆ, ಬಹುಶಃ ಇಡೀ ವಿಶ್ವದಲ್ಲೇ ಎಲ್ಲಿಯೂ ಈ ರೀತಿ ಲಸಿಕೆಯನ್ನು ನೀಡಲಾಗಿಲ್ಲ.
ಆರೋಗ್ಯ ಕಾರ್ಯಕರ್ತರಲ್ಲಿ 89 ಲಕ್ಷಕ್ಕೂ ಹೆಚ್ಚು ಜನರು ಮೊದಲ ಡೋಸ್ ಪಡೆದಿದ್ದಾರೆ. 54 ಲಕ್ಷಕ್ಕೂ ಹೆಚ್ಚು ಜನ ಎರಡನೇ ಡೋಸ್ ಪಡೆದಿದ್ದಾರೆ. 98 ಲಕ್ಷಕ್ಕೂ ಹೆಚ್ಚು ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ದೊರೆತರೆ 45 ಲಕ್ಷಕ್ಕೂ ಹೆಚ್ಚು ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,31,968 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,30,60,542 ತಲುಪಿದೆ.