ಹುಬ್ಬಳ್ಳಿಯಲ್ಲಿ ಸಚಿವ ಸಿ.ಸಿ.ಪಾಟೀಲ್ ಮಾತನಾಡಿದರು ಹುಬ್ಬಳ್ಳಿ:ನಾಳೆ ಕರ್ನಾಟಕದ ಇತಿಹಾಸದಲ್ಲಿ ಒಂದು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನವಾಗಿದೆ. ಒಳಮೀಸಲಾತಿಯನ್ನು ಬಸವರಾಜ ಬೊಮ್ಮಾಯಿ ಅನುಷ್ಠಾನಕ್ಕೆ ತಂದಿದ್ದಾರೆ. ಇದು ಐತಿಹಾಸಿಕ ನಿರ್ಧಾರವಾಗಿದೆ. ಗುರುವಾರ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿಗಳಿಗೆ ಬೃಹತ್ ಅಭಿನಂದನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದರು.
ಕಾಂಗ್ರೆಸ್ ವಿರುದ್ಧ ಸಿ.ಸಿ.ಪಾಟೀಲ್ ಗರಂ:ಇಲ್ಲಿನ ನೆಹರು ಮೈದಾನದಲ್ಲಿ ಸಮಾವೇಶದ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ಕಾಂಗ್ರೆಸ್ ದಲಿತ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡಿತ್ತು. ಐದು ವರ್ಷಕ್ಕೊಮ್ಮೆ ಅವರನ್ನು ಬಾವಿಯಿಂದ ಹೊರಗೆ ತಗೆದು ವೋಟ್ ಹಾಕಿಸಿಕೊಂಡು ಮತ್ತೆ ಬಾವಿಯೊಳಗೆ ತಳ್ಳುತ್ತಿದ್ದರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಪರಿಶಿಷ್ಟ ಜಾತಿ ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಆಗಿದೆ. ಹೀಗಾಗಿ ಪರಿಶಿಷ್ಟ ಜನಾಂಗದಿಂದ ಸಿಎಂ ಬಸವರಾಜ ಬೊಮ್ಮಾಯಿಗೆ ಅಭಿನಂದನಾ ಸಮಾವೇಶ ಆಯೋಜನೆ ಮಾಡಿದೆ. ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:ಸಿಎಂ ಬೊಮ್ಮಾಯಿ ಪರ ನಾನು ನಿಲ್ಲುತ್ತೇನೆ, ಆದರೆ ಪಕ್ಷ ಸೇರಲ್ಲ: ಸುದೀಪ್ ಹೇಳಿಕೆ
ಇವಿಎಂ ಮಷಿನ್ನಲ್ಲಿ ಕಮಲಕ್ಕೆ ಮತ ಒತ್ತಿ ಋಣ ತೀರಿಸಬೇಕು- ಸಿ.ಸಿ. ಪಾಟೀಲ್: ಮೀಸಲಾತಿ ಹೆಚ್ಚಳ ವಿಚಾರ ಚುನಾವಣಾ ಸರಕು ಆಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಮುಖ್ಯಮಂತ್ರಿಗಳು ಮೀಸಲಾತಿ ನೀಡಿದ್ದಾರೆ. ಕಮಲಕ್ಕೆ ವೋಟ್ ಹಾಕೋದರ ಮೂಲಕ ನಮ್ಮ ಸಮುದಾಯದ ಜನ ಖುಣ ತೀರಿಸಬೇಕು. ವೀರಶೈವ ಲಿಂಗಾಯತರು, ಒಕ್ಕಲಿಗರು, ದಲಿತರು ಇವಿಎಂ ಮಷಿನ್ನಲ್ಲಿ ಕಮಲಕ್ಕೆ ಮತ ಒತ್ತಬೇಕು. ಕಮಲಕ್ಕೆ ಮತ ಒತ್ತಿ ನಮ್ಮ ಸಮುದಾಯದವರು ಖುಣ ತೀರಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆ ವಿಚಾರ: ನಟನ ಮೊದಲ ಪ್ರತಿಕ್ರಿಯೆ ಹೀಗಿದೆ
ಮತ ಹಾಕುವುದರ ಮೂಲಕ ಕೃತಜ್ಞತೆ ಸಲ್ಲಿಸಬೇಕು- ಸಿ.ಸಿ. ಪಾಟೀಲ್:ಈ ಬಾರಿ ನೂರಕ್ಕೆ ನೂರು ಪ್ರತಿಶತದಷ್ಟು ಜನರು ನಮಗೆ ಮತ ಹಾಕ್ತಾರೆ ಎಂದು ಅವರು ಅಭಿಪ್ರಾಯಪಟ್ಟರು. ಬಳಿಕ ಮೀಸಲಾತಿ ವಿಚಾರವನ್ನು ರಾಜಕೀಯ ದಾಳವಾಗಿ ಬಳಸಿಕೊಂಡಿದ್ದಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಸಿ. ಪಾಟೀಲ್ ಅವರು, ಪರೋಕ್ಷವಾಗಿ ಮೀಸಲಾತಿ ಕೊಟ್ಟಿದ್ದೇವೆ ನಮಗೆ ಮತ ಹಾಕಬೇಕೆಂದರು. 2023ರ ಚುನಾವಣೆಯಲ್ಲಿ ಮತ ಹಾಕೋ ಮೂಲಕ ಬಸವರಾಜ ಬೊಮ್ಮಾಯಿಗೆ ಸನ್ಮಾನ ಮಾಡಲಾಗುವುದು. ಹೂವಿನ ಮಾಲೆ ಹಾಕೋದಕ್ಕಿಂತ ಮತ ಹಾಕಬೇಕು ಎಂದರು. ಉಪಕಾರಕ್ಕೆ ಕೃತಜ್ಞತೆ ಸಲ್ಲಿಸುವ ಸಂಪ್ರದಾಯ ನಮ್ಮಲ್ಲಿದೆ. ಹಿಂದೂ ಸಮಾಜವು ಉಪಕಾರ ತಗೊಂಡಿದ್ದು, ಮತ ಹಾಕುವುದರ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದು ಸಿ.ಸಿ. ಪಾಟೀಲ ಹೇಳಿಕೆ ನೀಡಿದರು.
ಇದನ್ನೂ ಓದಿ:ತೆನೆ ಇಳಿಸಿ ಕೇಸರಿ ಪಡೆ ಸೇರಿದ ಮಾಜಿ ಸಂಸದ ಶಿವರಾಮೇಗೌಡ: ಮಂಡ್ಯದಲ್ಲಿ ಕಮಲ ಅರಳಿಸುವ ಭರವಸೆ
ಇದನ್ನೂ ಓದಿ:ಕರ್ನಾಟಕ ವಿಧಾನಸಭೆ ಚುನಾವಣೆ: ಶಿಗ್ಗಾಂವಿ ಅಲ್ಲ.. ಕುಂದಗೋಳ ಕ್ಷೇತ್ರದ ಮೇಲೆ ಸಿಎಂ ಬೊಮ್ಮಾಯಿ ಕಣ್ಣು