ಕರ್ನಾಟಕ

karnataka

ETV Bharat / assembly-elections

ಮತದಾರರು ಒಳ್ಳೆಯ ವ್ಯಕ್ತಿಗೆ ಮತ ಹಾಕಿದರೆ ರಾಜ್ಯ ಸುಧಾರಣೆ : ಸಭಾಪತಿ ಬಸವರಾಜ ಹೊರಟ್ಟಿ - ಮತದಾರರು ಒಳ್ಳೆಯ ವ್ಯಕ್ತಿಗೆ ಮತ ಹಾಕಿದರೆ ರಾಜ್ಯ ಸುಧಾರಣೆ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರಿಗೆ ಉತ್ತಮ ನಾಯಕರನ್ನು ಆರಿಸಲು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ.

basavaraja horatti
ಸಭಾಪತಿ ಬಸವರಾಜ ಹೊರಟ್ಟಿ

By

Published : Mar 30, 2023, 3:27 PM IST

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ವಿಜಯಪುರ:ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆ ವಿಜಯಪುರ ನಗರದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವ ವ್ಯಕ್ತಿ ಕೆಲಸ ಮಾಡುತ್ತಾರೋ ಅವರು ಜನರ ಸಂಪರ್ಕದಲ್ಲಿರುತ್ತಾರೆ. ಜನರಿಗೆ ಸ್ಪಂದಿಸುವ ವ್ಯಕ್ತಿಗೆ ಮತ ಹಾಕಬೇಕೆಂದು ಹೊರಟ್ಟಿ ಮನವಿ ಮಾಡಿದ್ದಾರೆ. ಶಾಸಕನಾಗಿ ಆಯ್ಕೆಯಾಗಿ ರಾಜಧಾನಿಯಲ್ಲಿ ಕುಳಿತು ಹಣ ಮಾಡುವವರಿಗೆ ಮತ ಹಾಕಬಾರದು, ಒಳ್ಳೆಯ ವ್ಯಕ್ತಿಗೆ ನಾಡಿನ ಕಾಳಜಿ ಇರುವ ವ್ಯಕ್ತಿಗೆ ಮತ ಹಾಕಬೇಕೆಂದು ತಿಳಿಸಿದರು.

ಮತದಾರರನ್ನು ಸೆಳೆಯಲು ವಿವಿಧ ಕಾಣಿಕೆ ಹಂಚಿಕೆ ವಿಚಾರ: ಕಾಣಿಕೆ ವಿಚಾರದಲ್ಲಿ ಜನರು ಕೆಟ್ಟಾಗಲೇ ರಾಜಕಾರಣಿಗಳು ಕೆಟ್ಟಿದ್ದಾರೆ, ರಾಜಕಾರಣಿಗಳು ನೀಡುವ ಕಾಣಿಕೆಯ ಮೇಲೆ ಜನರು ಜೀವನ ಮಾಡುತ್ತಾರಾ ಎಂದು ಪ್ರಶ್ನಿಸಿದ ಪರಿಷತ್ ಸಭಾಪತಿ, ನಾವೇನು ಶಂಖ ಹೊಡೆದರೂ ಬದಲಾವಣೆ ಆಗಲ್ಲ. ಮತದಾರರು ಮನಸ್ಸು ಮಾಡಿದರೆ 30 ರಿಂದ 40% ಪ್ರಮಾಣದಲ್ಲಿ ಬದಲಾವಣೆ ಆಗಬಹುದು. ಗಿಫ್ಟ್ ಹಂಚಿಕೆಯಂತಹ ಘಟನೆಗಳು ನಡೆಯಬಾರದು. ಜನರು ಇದಕ್ಕೆ ಅವಕಾಶ ನೀಡಬಾರದರು ಎಂದು ವಿಧಾನ ಪರಿಷತ್​ ಸಭಾಪತಿಗಳು ಹೇಳಿದರು.

ಇದನ್ನೂ ಓದಿ:ಖಾಕಿಗೆ ಬೈ​ ರಾಜಕೀಯಕ್ಕೆ ಜೈ: ರೆಡ್ಡಿ ಪಕ್ಷದಿಂದ ಚುನಾವಣಾ ಅಖಾಡಕ್ಕಿಳಿದ ಪೊಲೀಸ್‌ ಹೆಡ್​ ಕಾನ್ಸ್​ಟೇಬಲ್​

ಒಳ್ಳೆಯ ವ್ಯಕ್ತಿಗೆ ಮತ ಹಾಕಿದರೆ ರಾಜ್ಯ ಸುಧಾರಣೆಯಾಗುತ್ತದೆ-ಬಸವರಾಜ ಹೊರಟ್ಟಿ: ಹಣ ಹಾಗೂ ಇತರೆ ಕಾಣಿಕೆ ನೀಡಿ ಆಯ್ಕೆಯಾದವ ಏನು ಆಗುತ್ತಾನೆ? ಎಂದು ಪ್ರಶ್ನಿಸಿದ ಅವರು, ಹಣ ಕೊಟ್ಟು ಆಯ್ಕೆಯಾದ ಬಳಿಕ ನೀವು ಪುಗಸಟ್ಟೆ ಮತ ಹಾಕಿಲ್ಲ ಎಂದು ಮತದಾರರಿಗೆ ಹೇಳುತ್ತಾನೆ. ಹಾಗಾಗಿ ಮತದಾರರು ಒಳ್ಳೆಯ ವ್ಯಕ್ತಿಗೆ ಮತ ಹಾಕಿದರೆ ರಾಜ್ಯ ಸುಧಾರಣೆಯಾಗುತ್ತದೆ. ಓರ್ವ ಸಭಾಪತಿಯಾಗಿ ನಾನು ಈ ಮಾತು ಹೇಳುತ್ತಿದ್ದೇನೆ ಎಂದರು.

ಅಭಿವೃದ್ಧಿ ಕಾರ್ಯಸೂಚಿ ಆಧರಿಸಿ ಜನಾಶೀರ್ವಾ ಬಯಸುತ್ತೇವೆ-ನರೇಂದ್ರ ಮೋದಿ:ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕವು ಘೋಷಣೆಯಾಗಿದ್ದು, ಕರ್ನಾಟಕದ ಜನರಿಗೆ ತಮ್ಮ ನಾಯಕರನ್ನು ಆರಿಸಲು ಕೇವಲ ಒಂದು ತಿಂಗಳು 10 ದಿನಗಳು ಬಾಕಿ ಇದೆ. ಪಕ್ಷಗಳೆಲ್ಲವೂ ಚುನಾವಣಾ ಪ್ರಚಾರದಲ್ಲಿ ಬಿರುಸಿನಲ್ಲಿ ತೊಡಗಿದ್ದು, ರಾಜ್ಯದ ಜನತೆಯನ್ನು ಸೆಳೆಯುವಲ್ಲಿ ಶತಪ್ರಯತ್ನ ಪಡುತ್ತಿದ್ದಾರೆ. ಈ ಮಧ್ಯೆ ಭಾರತದ ನರೇಂದ್ರ ಮೋದಿಯವರು ಕರ್ನಾಟಕ ಜನತೆಗೆ ಚುನಾವಣೆ ಕುರಿತು ಟ್ವೀಟ್​ ಮಾಡಿದ್ದಾರೆ.

ದುಡಿಯುವ ರಾಜ್ಯದ ಜನರಿಗೆ ಧನ್ಯವಾದಗಳು-ನರೇಂದ್ರ ಮೋದಿ:ಪ್ರಧಾನಿ ನರೇಂದ್ರಮೋದಿ ಅವರ ಟ್ವೀಟ್​ ಕನ್ನಡದಲ್ಲಿದ್ದು ನಾವು ಜನಾಶೀರ್ವಾದ ಬಯಸುತ್ತಿದ್ದೇವೆ ಎಂದಿದ್ದಾರೆ. ಕರ್ನಾಟಕ ಅಭಿವೃದ್ಧಿಯ ಶಕ್ತಿ ಕೇಂದ್ರ, ಕಷ್ಟಪಟ್ಟು ದುಡಿಯುವ ರಾಜ್ಯದ ಜನರಿಗೆ ಧನ್ಯವಾದಗಳು. ಕರ್ನಾಟಕ ಬೆಳವಣಿಗೆಯ ಪಯಣವನ್ನು ವೇಗಗೊಳಿಸಲು ಹಾಗು ಬಡವರು, ಸಮಾಜದಲ್ಲಿ ಮೂಲೆಗುಂಪಾದವರು, ದಮನಿತರನ್ನು ಸಶಕ್ತಗೊಳಿಸಲು ಬಿಜೆಪಿ ಬದ್ಧವಾಗಿದೆ. ನಾವು ನಮ್ಮ ಅಭಿವೃದ್ಧಿಯ ಕಾರ್ಯಸೂಚಿಯನ್ನು ಆಧರಿಸಿ ಜನಾಶೀರ್ವಾದ ಬಯಸುತ್ತೇವೆ ಎಂದು ಟ್ವೀಟ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:ಟಿಕೆಟ್​ ಹಂಚಿಕೆ ಅಸಮಾಧಾನ: ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ

ABOUT THE AUTHOR

...view details