ಕರ್ನಾಟಕ

karnataka

ETV Bharat / assembly-elections

ಸಚಿವ ಅಂಗಾರ, ರಘುಪತಿ ಭಟ್ ಸೇರಿ 7 ಹಾಲಿ ಶಾಸಕರಿಗಿಲ್ಲ ಬಿಜೆಪಿ ಟಿಕೆಟ್: ಇನ್ನೂ 16 ಹಾಲಿಗಳ ಕ್ಷೇತ್ರ ಕುತೂಹಲ!

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ 189 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇನ್ನೂ ಬಾಕಿ ಇರುವ 35 ಕ್ಷೇತ್ರಗಳಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕರುಣಾಕರರೆಡ್ಡಿ, ಅರವಿಂದ ಲಿಂಬಾವಳಿ, ರಾಮದಾಸ್ ಕ್ಷೇತ್ರ ಸೇರಿ 16 ಕ್ಷೇತ್ರ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಟಿಕೆಟ್​ ಘೋಷಿಸಿಲ್ಲ.

ಸಚಿವ ಅಂಗಾರ, ರಘುಪತಿ ಭಟ್
ಸಚಿವ ಅಂಗಾರ, ರಘುಪತಿ ಭಟ್

By

Published : Apr 12, 2023, 12:45 AM IST

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಓರ್ವ ಸಚಿವ, ಓರ್ವ ಮಾಜಿ ಸಚಿವ ಸೇರಿದಂತೆ 7 ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದೆ. 16 ಹಾಲಿ ಶಾಸಕರ ಕ್ಷೇತ್ರಗಳಿಗೆ ಇನ್ನು ಟಿಕೆಟ್ ಘೋಷಣೆ ಮಾಡಿಲ್ಲ. ಇದರಿಂದ ಮತ್ತಷ್ಟು ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.

ಈ ಬಾರಿ ಕೆಲ ಹಾಲಿ ಶಾಸಕರಿಗೆ ಕೋಕ್ ನೀಡಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎನ್ನುವ ಮಾತು ನಿಜವಾಗಿದ್ದು, ಯಡಿಯೂರಪ್ಪ ಮತ್ತು ಬೊಮ್ಮಾಯಿ ಸಂಪುಟದಲ್ಲಿದ್ದ ಮೀನುಗಾರಿಕಾ ಸಚಿವ ಎಸ್.ಅಂಗಾರ, ಸಾಕಷ್ಟು ಸುದ್ದಿಯಲ್ಲಿದ್ದ ರಘುಪತಿ ಭಟ್, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸೇರಿದಂತೆ 7 ಹಾಲಿ ಶಾಸಕರಿಗೆ ಕೋಕ್ ನೀಡಿ ಹೊಸ ಮುಖಗಳಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.

ಯಾರಿಗೆಗೆಲ್ಲಾ ಕೊಕ್?: ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಬದಲು ಡಾ.ರವಿಪಾಟೀಲ್​ಗೆ ಟಿಕೆಟ್ ನೀಡಲಾಗಿದೆ. ಕಿತ್ತೂರು ಶಾಸಕ ಡಿಎಂ ಬಸವಂತರಾಯ ಬದಲು ಮಹಾಂತೇಶ ದೊಡ್ಡಗೌಡ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಬದಲು ಚಿಕ್ಕ ರೇವಣ್ಣ, ಹೊಸದುರ್ಗ ಗೂಳಿಹಟ್ಟಿ ಶೇಖರ್ ಬದಲು ಎಸ್.ಲಿಂಗಮೂರ್ತಿ, ಉಡುಪಿ ಶಾಸಕ ರಘುಪತಿ ಭಟ್ ಬದಲು ಯಶಪಾಲ್ ಸುವರ್ಣಗೆ ಟಿಕೆಟ್ ನೀಡಲಾಗಿದೆ.

ಅದೇ ರೀತಿಯಾಗಿ ಕಾಪು ಲಾಲಾಜಿ ಮೆಂಡನ್ ಬದಲು ಸುರೇಶ್ ಶೆಟ್ಟಿಗೆ ಟಿಕೆಟ್ ನೀಡಲಾಗಿದೆ. ಪುತ್ತೂರು ಶಾಸಕ ಸಂಜೀವ್ ಮಠಂದೂರು ಬದಲಿಗೆ ಆಶಾ ತಿಮ್ಮಪ್ಪಗೆ ಟಿಕೆಟ್ ನೀಡಲಾಗಿದೆ. ಸುಳ್ಳ ಶಾಸಕರಾದ ಸಚಿವ ಎಸ್.ಅಂಗಾರ ಬದಲಿ ಭಾಗೀರಥಿ ಮುರುಲ್ಯಾ ಅವರಿಗೆ ಟಿಕೆಟ್ ನೀಡಲಾಗಿದೆ.

16 ಹಾಲಿ ಕ್ಷೇತ್ರಗಳ ಟಿಕೆಟ್​ ಬಾಕಿ:224 ಕ್ಷೇತ್ರಗಳಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಪ್ರಕಟವಾಗಿದ್ದು ಬಾಕಿ ಇರುವ 35 ಕ್ಷೇತ್ರಗಳಲ್ಲಿ 16 ಕ್ಷೇತ್ರ ಬಿಜೆಪಿ ಶಾಸಕರಿರುವ ಕ್ಷೇತ್ರಗಳಾಗಿವೆ. ಆದರೆ, ಸೋಮಣ್ಣಗೆ ಗೋವಿಂದರಾಜನಗರ ಬಿಟ್ಟು ಚಾಮರಾಜನರ ಮತ್ತು ವರುಣಾ ನೀಡಿದ್ದು ಗೋವಿಂದ ರಾಜನಗರಕ್ಕೆ ಟಿಕೆಟ್ ಘೋಷಿಸಿಲ್ಲ. ಇದನ್ನು ಬಿಟ್ಟರೆ ಪ್ರಮುಖವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕರುಣಾಕರರೆಡ್ಡಿ, ಅರವಿಂದ ಲಿಂಬಾವಳಿ, ರಾಮದಾಸ್ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿಲ್ಲ. ಹಾಗಾಗಿ ಇನ್ನಷ್ಟು ಹಾಲಿಗಳಿಗೆ ಕೊಕ್ ನೀಡಲಾಗುತ್ತದೆ ಎನ್ನಲಾಗಿದೆ‌.

ಸೇಡಂನಲ್ಲಿ ರಾಜಕುಮಾರ್ ಪಾಟೀಲ್, ಗಂಗಾವತಿಯಲ್ಲಿ ಪರಣ್ಣ ಮುನವಳ್ಳಿ, ರೋಣದಲ್ಲಿ ಕಳಕಪ್ಪ ಬಂಡಿ, ಕಲಘಟಗಿಯಲ್ಲಿ ನಿಂಬಣ್ಣನವರ್, ಹಾವೇರಿಯಲ್ಲಿ ನೆಹರೂ ಓಳೆಕಾರ್, ಹರಪನಹಳ್ಳಿಯಲ್ಲಿ ಕರುಣಾಕರರೆಡ್ಡಿ, ದಾವಣಗೆರೆ ಉತ್ತರದಲ್ಲಿ ಎಸ್.ಎ.ರವೀಂದ್ರನಾಥ್, ಮಾಯಕೊಂಡದಲ್ಲಿ ಲಿಂಗಪ್ಪ, ಚನ್ನಗಿರಿಯಲ್ಲಿ ಮಾಡಾಳು ವಿರೂಪಾಕ್ಷಪ್ಪ, ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ, ಬೈಂದೂರಿನಲ್ಲಿ ಸುಕುಮಾರಶೆಟ್ಟಿ, ಮೂಡಿಗೆರೆಯಲ್ಲಿ ಎಂಪಿ ಕುಮಾರಸ್ವಾಮಿ, ಮಹದೇವಪುರದಲ್ಲಿ ಅರವಿಂದ ಲಿಂಬಾವಳಿ, ಕೃಷ್ಣರಾಜದಲ್ಲಿ ಎಸ್.ಎ ರಾಮದಾಸ್, ಹುಬ್ಬಳ್ಳಿ ಕೇಂದ್ರದಲ್ಲಿ ಜಗದೀಶ್ ಶೆಟ್ಟರ್.. ಹೀಗೆ ಬಿಜೆಪಿಯ ಶಾಸಕರಾಗಿದ್ದ ಇವರ ಕ್ಷೇತ್ರಗಳಿಗೆ ಇನ್ನು ಅಭ್ಯರ್ಥಿಗಳ ಹೆಸರು ಪ್ರಕಟಿಸಿಲ್ಲ.

ಇದನ್ನೂ ಓದಿ:ಅಥಣಿಯಲ್ಲಿ ಮಹೇಶ ಕುಮಟಳ್ಳಿಗೆ ಬಿಜೆಪಿ ಮಣೆ... ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಡೆ ನಿಗೂಢ

ABOUT THE AUTHOR

...view details