ನಂಜನಗೂಡು (ಮೈಸೂರು):ಕಾಂಗ್ರೆಸ್ ಪಕ್ಷವುಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸಲು ನೋಡುತ್ತಿದೆ. ತುಕಡೆ ತುಕಡೆ ಸಮಸ್ಯೆ ಕಾಂಗ್ರೆಸ್‌ನಲ್ಲಿ ಹೆಚ್ಚಾಗಿದೆ ಎಂದು ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ. ನಂಜನಗೂಡಿನಲ್ಲಿ ಕೊನೆಯ ಚುನಾವಣಾ ಪ್ರಚಾರ ಭಾಷಣ ಮಾಡಿದ ಮೋದಿ, ಕಾಂಗ್ರೆಸ್ ದುರಾಡಳಿತ, ಕರ್ನಾಟಕದ ಸಾರ್ವಭೌಮತ್ವವನ್ನೇ ಪ್ರಶ್ನಿಸುವ ಹೇಳಿಕೆ ವಿರುದ್ಧ ಹರಿಹಾಯ್ದಿದ್ದಾರೆ.
ಮೈಸೂರು ರೇಷ್ಮೆ, ಮೈಸೂರು ಮಲ್ಲಿಗೆ, ನಂಜನಗೂಡು ಬಾಳೆಹಣ್ಣು ವಿಶ್ವಪ್ರಸಿದ್ಧಿಯಾಗಿದೆ. ಸ್ಥಳೀಯ ಉತ್ಪನ್ನ, ಇಲ್ಲಿನ ಸಂಸ್ಕೃತಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಬಿಜೆಪಿ ಶ್ರಮ ಪಡುತ್ತಿದೆ. ಕರ್ನಾಟಕದ ಈ ಚುನಾವಣೆ ಪ್ರಮುಖವಾಗಿದೆ. ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡಲು ನಡೆಯುತ್ತಿರುವ ಚುನಾವಣೆಯಾಗಿದೆ. ಡಬಲ್ ಎಂಜಿನ್ ಸರ್ಕಾರ, ಡಬಲ್ ಸೇವಾ ಮನೋಭಾವ, ಡಬಲ್ ಶಕ್ತಿಯಿಂದ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದ್ರು.
ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಇದ್ದಾಗ ಕರ್ನಾಟಕ ಅಭಿವೃದ್ಧಿ ಕುಂಠಿತವಾಗಿತ್ತು. ಕರ್ನಾಟಕಕ್ಕೆ ಅತೀ ಹೆಚ್ಚಿನ ನೇರ ವಿದೇಶಿ ಬಂಡವಾಳ ಹರಿದು ಬರುತ್ತಿದೆ. ಈ ಕೆಲಸದಿಂದ ನಿಮಗೆ ಹೆಮ್ಮೆಯಾಗುತ್ತಿದೆ ಅಲ್ವಾ?. ಮೊಬೈಲ್ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಅತೀ ದೊಡ್ಡ ಮೊಬೈಲ್ ಕಂಪನಿಗಳು ಕರ್ನಾಟಕಕ್ಕೆ ಆಗಮಿಸುತ್ತಿದೆ. ಇದನ್ನು ಎಲ್ಲಾ ಕನ್ನಡಿಗನಿಗೆ ಹೆಮ್ಮೆಯ ವಿಷವಾಗಿದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಇದು ಹೆಮ್ಮೆ ತರುವ ವಿಷವಲ್ಲ ಎಂದು ಮೋದಿ ಗುಡುಗಿದರು.
ಗರೀಬಿ ಹಠಾವೋ ಗ್ಯಾರೆಂಟಿಯನ್ನು ಕಾಂಗ್ರೆಸ್ ದಶಕಗಳ ಹಿಂದೆ ನೀಡಿತ್ತು. ಆದರೆ ಇದು ಇತಿಹಾಸದ ಅತೀ ದೊಡ್ಡ ಸುಳ್ಳಿನ ಕಂತೆಯಾಗಿ ಉಳಿದುಕೊಂಡಿದೆ. ಕಾಂಗ್ರೆಸ್ ಸುಳ್ಳಿನ ಕಂತೆಯನ್ನೇ ಜನರ ಮುಂದಿಡುತ್ತದೆ. ಹೀಗಾಗಿ ಕಾಂಗ್ರೆಸ್‌ಗೆ ಬಡತನ ಹೋಗಲಾಡಿಸಲು ಸಾಧ್ಯವಾಗಿಲ್ಲ. ಯೋಗ, ಆಯುರ್ವೇದದಲ್ಲಿ ಭಾರತದ ತಾಕತ್ತು ಅಡಗಿದೆ. ಈ ವಿಚಾರದಲ್ಲಿ ಮೈಸೂರು ಮುಂಚೂಣಿಯಲ್ಲಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯೋಗವನ್ನು ಕಡೆಗಣಿಸಿತ್ತು. ಇಂದು ಇಡೀ ವಿಶ್ವವೇ ಇಂದು ಯೋಗ ಮಾಡುತ್ತಿದೆ. ಇದಕ್ಕೆ ಕಾರಣವೇನು? ಇದಕ್ಕೆ ಮೋದಿ ಕಾರಣವಲ್ಲ, ನೀವು ನೀಡಿದ ಒಂದು ಮತ ಕಾರಣವಾಗಿದೆ ಎಂದು ಮೋದಿ ಹೇಳಿದ್ದಾರೆ.