ದಾವಣಗೆರೆ:ಜಗಳೂರು ವಿಧಾನಸಭಾ ಮತಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರಾ ಪೈಪೋಟಿ ಇದ್ದು ಜೆಡಿಎಸ್ ಕೂಡ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವ ಯತ್ನ ನಡೆಸಿದೆ. ಟಿಕೆಟ್ಗಾಗಿ ಮೂರು ಪಕ್ಷಗಳಿಂದ ಪೈಪೋಟಿ ನಡೆದಿದೆ. ಕ್ಷೇತ್ರಕ್ಕೆ ಆಪ್ ಪಕ್ಷದಿಂದ ಗೋವಿಂದರಾಜು ಅವರನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ.
ಪ್ರಮುಖ ರಾಜಕೀಯ ಮುಖಂಡರು ಪಕ್ಷಾಂತರಿಗಳಾಗಿದ್ದು ಕ್ಷೇತ್ರದ ಇತಿಹಾಸ. ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಅವರು ಕಾಂಗ್ರೆಸ್ ಸೇರಿಕೊಂಡಿದ್ದರೆ, 2011ರಲ್ಲಿ ಕಾಂಗ್ರೆಸ್ ತೊರೆದ ಎಸ್ ವಿ ರಾಮಚಂದ್ರ ಬಿಜೆಪಿ ಸೇರಿದ್ದರು. ಸದ್ಯ ಎಸ್ ವಿ ರಾಮಚಂದ್ರ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು ಮತ್ತೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಇದರಿಂದ ಇಲ್ಲಿ ಯಾರೇ ಅದಲು ಬದಲಾಗಲಿ, ಫಲಿತಾಂಶ ಮಾತ್ರ ಯಾವಾಗಲು ಹಾವು ಏಣಿ ಆಟದಂತೆಯೇ ಇರುತ್ತದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಟಿಕೆಟ್ ಅಕಾಂಕ್ಷಿತರ ಪಟ್ಟಿ:ಆಪ್ ಪಕ್ಷ ಹೊರತು ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಗಳ ಅಧಿಕೃತ ಘೋಷಣೆಯಾಗಿಲ್ಲ. ಆದರೂ, ಟಿಕೆಟ್ ಆಕಾಂಕ್ಷಿಗಳ ನಡುವಿನ ಪೈಪೋಟಿ ಜೋರಾಗಿದೆ. ಬಿಜೆಪಿಯಿಂದ ಹಾಲಿ ಶಾಸಕ ಎಸ್ ವಿ ರಾಮಚಂದ್ರ ಟಿಕೆಟ್ ಸಿಗುವವರ ಪಟ್ಟಿಯಲ್ಲಿ ಮುಂದಿದ್ದಾರೆ. ಕಾಂಗ್ರೆಸ್ನಲ್ಲಿ ಕೂಡ ಆಕಾಂಕ್ಷಿತರ ಪಟ್ಟಿ ದೊಡ್ಡದಿದೆ. ಕಾಂಗ್ರೆಸ್ನಿಂದ ಬಿ. ದೇವೇಂದ್ರಪ್ಪ, ಹೆಚ್ ಪಿ ರಾಜೇಶ್ (ಮಾಜಿ ಶಾಸಕ), ಕೆಪಿ ಪಾಲಯ್ಯ, ಪುಷ್ಪಾ ಲಕ್ಷ್ಮಣ್ ಸ್ವಾಮಿ, ಎಂ ಹನುಮಂತಪ್ಪ, ಜಿಆರ್ ರವಿಚಂದ್ರ ಸೇರಿದಂತೆ ಒಟ್ಟು 6 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್ ಕೂಡ ಅದೇ ದಾರಿಯಲ್ಲಿದೆ. ಜೆಡಿಎಸ್ನಿಂದ ಸತತವಾಗಿ ಸ್ಪರ್ಧಿಸಿ ಸೋಲುಂಡಿರುವ ದೇವೆಂದ್ರಪ್ಪ, ಕಾಂಗ್ರೆಸ್ ಪಕ್ಷದ ಕೈ ಹಿಡಿದಿರುವುದು ಕೈ ಪಾಳಯಕ್ಕೆ ಮತ್ತಷ್ಟು ಬಲಬಂದಂತಾಗಿದೆ.
ಡ್ರೈ ಲ್ಯಾಂಡ್ ಕ್ಷೇತ್ರ: ಜಿಲ್ಲೆಯಲ್ಲಿ ಜಗಳೂರು ವಿಧಾನಸಭಾ ಮತಕ್ಷೇತ್ರ ಡ್ರೈ ಲ್ಯಾಂಡ್ ಅಂತಲೇ ಫೇಮಸ್. ಕ್ಷೇತ್ರದಲ್ಲಿ ಸರಿಯಾದ ನೀರಿನ ಸೌಲಭ್ಯವಿಲ್ಲ. ಬೇರೆ ಕ್ಷೇತ್ರಕ್ಕೆ ಹೋಲಿಕೆ ಮಾಡಿದರೆ ಅಭಿವೃದ್ಧಿ ಕೂಡ ಕಡಿಮೆ. ಹೀಗಾಗಿ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಜಗಳೂರು ಹೆಸರು ಸದಾ ಇರುತ್ತದೆ. ಆದರೆ, ರಾಜಕೀಯ ಮಾತ್ರ ರಂಗು ರಂಗುನಿಂದ ಕೂಡಿರುತ್ತದೆ.
ಜಗಳೂರು 2008ರಲ್ಲಿ ಎಸ್ಟಿ ಮೀಸಲು ಕ್ಷೇತ್ರವಾಗಿ ರಚನೆಯಾದ ವರ್ಷ ಕಾಂಗ್ರೆಸ್ನಿಂದ ಎಸ್ ವಿ ರಾಮಚಂದ್ರಪ್ಪ ಗೆದ್ದಿದ್ದರು. ಬದಲಾದ ಸನ್ನಿವೇಶದಿಂದ 2011ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರು, ಮತ್ತೆ ಗೆದ್ದು ಬಿಎಸ್ವೈ ನೇತೃತ್ವದ ಸರ್ಕಾರವನ್ನು ಭದ್ರಪಡಿಸಿದ್ದರು. ಬಿಜೆಪಿಯಲ್ಲಿದ್ದ ಹೆಚ್ ಪಿ ರಾಜೇಶ್ ಪಕ್ಷ ಬಿಟ್ಟು ಪಕ್ಷೇತರರಾಗಿ ಸ್ಪರ್ಧಿಸಿ ಸೋಲುಂಡಿದ್ದರು. ಕೆಲವು ದಿನಗಳ ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಿಂದ 2013ರಲ್ಲಿ ಮತ್ತೆ ಪಕ್ಷಾಂತರ ಮಾಡಿದ್ದ ಎಸ್ ವಿ ರಾಮಚಂದ್ರಪ್ಪ, ಬಿಎಸ್ ಯಡಿಯೂರಪ್ಪ ಜೊತೆ ಕೆಜೆಪಿ ಸೇರಿಕೊಂಡು ಅದೇ ಪ್ರತಿಸ್ಪರ್ಧಿ ಹೆಚ್ ಪಿ ರಾಜೇಶ್ ವಿರುದ್ಧ ಕಣಕ್ಕಿಳಿದು ಸೋಲು ಕಂಡಿದ್ದರು. 2018ರಲ್ಲಿ ಮತ್ತೆ ಮರಳಿ ಗೂಡಿಗೆ ಬಂದ ರಾಮಚಂದ್ರಪ್ಪ, ಬಿಜೆಪಿಯಿಂದ ಸ್ಪರ್ಧಿಸಿ, ಕಾಂಗ್ರೆಸ್ನ ರಾಜೇಶ್ ವಿರುದ್ಧ ಬರೋಬ್ಬರಿ 29221 ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದರು. ಸದ್ಯ ಕ್ಷೇತ್ರದ ಶಾಸಕರು ಅವರೇ ಆಗಿದ್ದಾರೆ.
ಚುನಾವಣೆಗಳ ಇತಿಹಾಸ: ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರಾ ಹಣಾಹಣಿ ಇದೆ. 2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ವಿ ರಾಮಚಂದ್ರ 41961 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಹೆಚ್ ಪಿ ರಾಜೇಶ್ ವಿರುದ್ಧ ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಹೆಚ್ ಪಿ ರಾಜೇಶ್ 37528 ಮತಗಳನ್ನು ಪಡೆದು ಸೋಲುಂಡಿದ್ದರು. 2013 ಚುನಾವಣೆ ಫಲಿತಾಂಶ ನೋಡುವುದಾದರೆ ಈ ಕ್ಷೇತ್ರ ಕಾಂಗ್ರೆಸ್ ವಶವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಹೆಚ್ ಪಿ ರಾಜೇಶ್ 77805 ಮತಗಳನ್ನು ಪಡೆದು ಗೆಲುವು ಸಾಧೀಸಿದ್ದರೆ ಕೆಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ಎಸ್ ವಿ ರಾಮಚಂದ್ರ 40915 ಮತಗಳನ್ನು ಪಡೆದು ಪರಭವಗೊಂಡಿದ್ದರು. ಆ ವೇಳೆ ಇಲ್ಲಿ ಬಿಜೆಪಿ ಹೀನಾಯವಾಯಿ ಸೋಲುಂಡಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ವಿ ರಾಮಚಂದ್ರ 78948 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಹೆಚ್ ಪಿ ರಾಜೇಶ್ ವಿರುದ್ಧ ಗೆಲುವುದು ಸಾಧಿಸಿದ್ದರು. ಹೆಚ್ ಪಿ ರಾಜೇಶ್ 49727 ಮತಗಳನ್ನು ಪಡೆದು ಸೋಲು ಕಂಡಿದ್ದರು.
ಜಗಳೂರು ವಿಧಾನಸಭಾ ಮತಕ್ಷೇತ್ರ ವಿವರ ಮತದಾರರ ಮಾಹಿತಿ: ಕ್ಷೇತ್ರದಲ್ಲಿ 1,91,638 ಒಟ್ಟು ಮತದಾರರಿದ್ದು, 97,048 ಪುರುಷ ಮತದಾರರು, 94,510 ಮಹಿಳಾ ಮತದಾರರು, 10 ತೃತಿಯ ಲಿಂಗಿಗಳು ಮತದಾರರಿದ್ದಾರೆ.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ನಾಯಕರ ಮನೆ ಮುಂದೆ ಮುಖಂಡರು ಕಾರ್ಯಕರ್ತರ ಹೈಡ್ರಾಮ: ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ