ಕರ್ನಾಟಕ

karnataka

ETV Bharat / assembly-elections

ಕಾರ್ಯಕರ್ತರನ್ನು ಕೇಳಿದ್ದರೆ ಅವರು ಒಪ್ಪುತ್ತಿರಲಿಲ್ಲ, ಅದಕ್ಕೆ ದಿಢೀರ್​ ನಿರ್ಧಾರ ಕೈಗೊಂಡಿದ್ದೇನೆ: ಈಶ್ವರಪ್ಪ - ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ

''ಚುನಾವಣಾ ಸಭೆಯಲ್ಲೇ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುವ ಕುರಿತು ಎಲ್ಲ ವರಿಷ್ಠರಿಗೆ ತಿಳಿಸಿದ್ದೆ. ಅವರು ಯಾರು ಕೂಡಾ ಇದಕ್ಕೆ ಒಪ್ಪಲಿಲ್ಲ. ನಂತರ, ಇಂದು ನಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ನಿವೃತ್ತಿ ಪತ್ರ ಕಳುಹಿಸಿದ್ದೇನೆ'' ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.

K S Eshwarappa
ಕೆ.ಎಸ್.ಈಶ್ವರಪ್ಪ

By

Published : Apr 11, 2023, 4:59 PM IST

Updated : Apr 11, 2023, 6:48 PM IST

ಶಿವಮೊಗ್ಗದಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು.

ಶಿವಮೊಗ್ಗ:''ಚುನಾವಣಾ ಸಭೆಯಲ್ಲಿ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಕುರಿತು ಎಲ್ಲ ವರಿಷ್ಠರಿಗೆ ತಿಳಿಸಿದ್ದೆ. ಅವರು ಯಾರೂ ಕೂಡಾ ಇದಕ್ಕೆ ಒಪ್ಪಲಿಲ್ಲ. ನಂತರ ನಾನು ಇಂದು ಈ ಬಗ್ಗೆ ಅಂತಿಮವಾದ ನಿರ್ಧಾರಕ್ಕೆ ಬಂದು, ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ'' ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಬಿಜೆಪಿ ಪಕ್ಷಕ್ಕೆ ಸಂಘಟನಾ ಶಕ್ತಿ ತುಂಬಬೇಕಿದೆ. ಜನರು ಬಿಜೆಪಿ ಪಕ್ಷಕ್ಕೆ ಪೂರ್ಣ ಬಹುಮತ ನೀಡಿಲ್ಲ. ಬಿ.ಎಸ್.ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಜಗದೀಶ್​ ಶೆಟ್ಟರ್ ಸಿಎಂ ಆಗಿದ್ದಾರೆ. ಮುಂದೆ ಮೋದಿ ಮತ್ತೆ ಪಿಎಂ ಆಗಬೇಕು ಎನ್ನುವುದು ನಮ್ಮ ಅಭಿಲಾಷೆಯಾಗಿದೆ. ಪಕ್ಷದ ಚಟುವಟಿಕೆಗಳಿಗೆ ಆದ್ಯತೆ ನೀಡಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಈ ನಿರ್ಧಾರ ನೆರವಾಗಲಿದೆ. ನಾನು ಸಭೆಯಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ವಿಚಾರ ಪ್ರಸ್ತಾಪ ಮಾಡಲಿಲ್ಲ. ಆದರೆ, ವೈಯಕ್ತಿಕವಾಗಿ ತಿಳಿಸಿದ್ದೆ. ಅಮಿತ್​ ಷಾ ಅವರು ನನಗೂ ಜಗದೀಶ್ ಅವರಿಗೆ ಟಿಕೆಟ್ ನೀಡುತ್ತೇವೆ ಎಂದು ಹೇಳಿದನ್ನು ನಾನು ಮಾಧ್ಯಮದಲ್ಲಿ‌ ನೋಡಿದ್ದೇನೆ. ಆದರೆ, ನನಗೆ ಮನಸ್ಸು ಒಪ್ಪದ ಕಾರಣ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಬಗ್ಗೆ ಪತ್ರ ಬರೆದಿದ್ದೇನೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

''ಈ ಕುರಿತು ಕಾರ್ಯಕರ್ತರನ್ನು ಕೇಳಿದರೆ ಅವರು ಒಪ್ಪುತ್ತಿರಲಿಲ್ಲ. ಇದರಿಂದ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುವ ವಿಚಾರವನ್ನು ಪಕ್ಷದ ಹಿರಿಯರಿಗೆ ಮಾತ್ರ ತಿಳಿಸಿದ್ದೇನೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಕೆ.ಎಸ್.ಈಶ್ವರಪ್ಪ ಇದೇ ವೇಳೆ, ದೃಢಪಡಿಸಿದರು.

''ಪುತ್ರ ಕಾಂತೇಶಗೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ದೊರೆಯುವ ಬಗ್ಗೆ ನನಗೆ ಗೊತ್ತಿಲ್ಲ'' ಎಂದು ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲು ನಾನು ಸೇವೆ ಮಾಡುತ್ತೇನೆ ಎಂದರು. ''ಈ ನಿರ್ಧಾರವನ್ನು ಕಾರ್ಯಕರ್ತರು ಒಪ್ಪಿಗೆ ನೀಡುವುದಿಲ್ಲ ಎಂಬ ಕಾರಣಕ್ಕೆ ಅವರೊಂದಿಗೆ ಸಮಾಲೋಚಿಸಿಲ್ಲ ಎಂದರು. ಅವರ ಪಕ್ಕದಲ್ಲಿದ್ದ ಕಾರ್ಯಕರ್ತರು ನಿಮ್ಮ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಜೋರಾಗಿ ಕೂಗಿದರು.

ಶಿವಮೊಗ್ಗ ಕ್ಷೇತ್ರದಿಂದ ಅಭ್ಯರ್ಥಿ ಯಾರು? ಕಾಂತೇಶಗೆ ಅವಕಾಶ ದೊರೆಯಲಿಯೇ ಎಂಬುದನ್ನು ಸ್ಪಷ್ಟಪಡಿಸಿ ಎಂದು ಬೆಂಬಲಿಗರು ಪಟ್ಟು ಹಿಡಿದರು. ಬೆಂಬಲಿಗರನ್ನು ಸಮಾಧಾನಪಡಿಸಿದ ಈಶ್ವರಪ್ಪ ಅವರು, ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ ಮೂರು ಹೆಸರುಗಳು ಕೇಂದ್ರ ಚುನಾವಣಾ ಸಮಿತಿ ಬಳಿ ಹೋಗಿವೆ. ಸಮಿತಿಯು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ:ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ..! ನಡ್ಡಾಗೆ ಪತ್ರ

Last Updated : Apr 11, 2023, 6:48 PM IST

ABOUT THE AUTHOR

...view details