ಕರ್ನಾಟಕ

karnataka

ETV Bharat / assembly-elections

ವಲಸಿಗರಿಗೆ ಟಿಕೆಟ್ ನೀಡಿದ್ರೆ ಕೆಲಸ ಮಾಡಲ್ಲವೆಂದು ಕಾಂಗ್ರೆಸ್ ಬೂತ್ ಅಧ್ಯಕ್ಷರಿಂದ ಪ್ರತಿಜ್ಞೆ - ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧ

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ವಲಸಿಗರಿಗೆ ಟಿಕೆಟ್ ‌ನೀಡದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆಗ್ರಹಿಸಿದರು.

Congress
ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ 'ಕೈ' ಕಾರ್ಯಕರ್ತರಿಂದ ತೀವ್ರ ವಿರೋಧ

By

Published : Mar 31, 2023, 10:01 PM IST

ವಲಸಿಗರಿಗೆ ಟಿಕೆಟ್ ನೀಡಿದ್ರೆ ಕೆಲಸ ಮಾಡಲ್ಲವೆಂದು ಕಾಂಗ್ರೆಸ್ ಬೂತ್ ಅಧ್ಯಕ್ಷರಿಂದ ಪ್ರತಿಜ್ಞೆ

ಶಿವಮೊಗ್ಗ:ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರುವ ವಲಸಿಗರಿಗೆ ಟಿಕೆಟ್ ‌ನೀಡದಂತೆ ಪಕ್ಷದ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ 11 ಜನ ಆಕಾಂಕ್ಷಿಗಳು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಸಲ್ಲಿಸಿರುವ 11 ಜನ ಆಕಾಂಕ್ಷಿಗಳ ಹೊರತಾಗಿ ಪಕ್ಷಕ್ಕೆ ಬರುವ ವಲಸಿಗರಿಗೆ ಟಿಕೆಟ್ ನೀಡಬಾರದೆಂದು ಆಕಾಂಕ್ಷಿಗಳು, ತಮ್ಮ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.

ಭೇಟಿಯ ವೇಳೆ ಟಿಕೆಟ್​ಗೆ ಅರ್ಜಿ ಸಲ್ಲಿಸಿರುವ 11 ಜನರು ಪಕ್ಷಕ್ಕೆ ನಿಷ್ಠೆ ಇರುವ ಕಾರ್ಯಕರ್ತರು.‌ ಇವರ ಹೊರತಾಗಿ ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ವಲಸೆ ಬಂದವರಿಗೆ ಟಿಕೆಟ್ ನೀಡದಂತೆ ಮನವಿ ಮಾಡಿ ಬಂದಿದ್ದಾರೆ‌. ಇದಕ್ಕೆ ಕಾಂಗ್ರೆಸ್ ನಾಯಕರು ಸಹ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಟಿಕೆಟ್ ನೀಡುವುದಾಗಿ ಭರವಸೆ ಕೊಟ್ಟಿರುವುದು ತಿಳಿದುಬಂದಿದೆ.

ಪ್ರತಿಜ್ಞೆ ಮಾಡಿದ ವಾರ್ಡ್ ಅಧ್ಯಕ್ಷರು:ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ 11 ಜನರ ಪೈಕಿ ಯಾರಿಗಾದರೂ ಕೂಡಾ ಟಿಕೆಟ್ ನೀಡಬೇಕು. ಒಂದು ವೇಳೆ ಪಕ್ಷವು 11 ಜನರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದ್ದೆ ಆದರೆ, ನಾವು ತಮ್ಮ ಅವರ ಪರ ಕೆಲಸ ಮಾಡೋದಿಲ್ಲ ಎಂದು ಬೂತ್ ಅಧ್ಯಕ್ಷರು ಪ್ರತಿಜ್ಞೆ ಮಾಡಿದ್ದಾರೆ.

ಪ್ರತಿಜ್ಞೆ ಮೂಲಕ ಬೂತ್ ಅಧ್ಯಕ್ಷರು ತಮ್ಮ ನಿಷ್ಠೆ ಪಕ್ಷದ ಕಾರ್ಯಕರ್ತರಿಗೆ ಹೊರತು ಹೊರಗಿನಿಂದ ಬಂದವರಿಗೆ ಅಲ್ಲ ಎಂಬುದನ್ನು ತೋರಿಸಿದ್ದಾರೆ. ಪಕ್ಷದ ಬೂತ್ ಅಧ್ಯಕ್ಷರು, ಪಕ್ಷದ ಹಿರಿಯ ನಾಯಕರಿಗೆ ಪರೋಕ್ಷವಾಗಿ ವಲಸಿಗರಿಗೆ ಟಿಕೆಟ್ ನೀಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಅನೇಕ ವರ್ಷಗಳ ಕಾಲ ಪಕ್ಷಕ್ಕೆ ನಿಷ್ಠೆೆಯಿಂದ ಇದ್ದು, ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಎ ಟಿ ರಾಮಸ್ವಾಮಿ ಬಿಜೆಪಿ ಸೇರ್ಪಡೆ ಖಚಿತ, ನಾನು ಬಿಜೆಪಿ ಬಿಡಲ್ಲ: ಸಚಿವ ಕೆ ಗೋಪಾಲಯ್ಯ

ಈ ನಡುವೆ ಆಯನೂರು ಮಂಜುನಾಥ್ ಅವರ ಬೀಗರು ಆದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ವೈ.ಹೆಚ್.ನಾಗರಾಜ್ ಅವರು ಆಯನೂರು ಮಂಜುನಾಥ್ ಅವರು ಕಾಂಗ್ರೆಸ್​ಗೆ ಬರುವುದಾರೆ ಸ್ವಾಗತ ಕೋರುವುದಾಗಿ ತಿಳಿಸಿದ್ದರು. ಆದ್ರೆ ಇದಕ್ಕೆ ಕಾಂಗ್ರೆಸ್​ನವರು ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ವಲಸಿಗರಿಗೆ ಟಿಕೆಟ್ ನೀಡಿದ್ರೆ ರಾಜೀನಾಮೆ ನೀಡುವುದಾಗಿ 32 ಬೂತ್ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ವರಿಷ್ಠರನ್ನು ಭೇಟಿ ಮಾಡಿ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಅಭ್ಯರ್ಥಿಗಳ ಆಯ್ಕೆಗೂ ಚುನಾವಣೆ ನಡೆಸಿದ ಬಿಜೆಪಿ: ಬ್ಯಾಲೆಟ್ ಬಾಕ್ಸ್ ಸೇರಿದ ಆಕಾಂಕ್ಷಿಗಳ ಹಣೆಬರಹ..!

ABOUT THE AUTHOR

...view details