ಬೆಂಗಳೂರು:ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ತೀವ್ರ ಕಸರತ್ತು ನಡೆಸಿ 42 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ. ಬಸವಕಲ್ಯಾಣದಿಂದ ಮಾಜಿ ಸಿಎಂ ಧರ್ಮಸಿಂಗ್ ಪುತ್ರ ವಿಜಯ್ ಧರ್ಮ ಸಿಂಗ್, ಧಾರವಾಡ ಗ್ರಾಮೀಣ ಕ್ಷೇತ್ರದಿಂದ ವಿನಯ್ ಕುಲಕರ್ಣಿ, ಬದಾಮಿಯಿಂದ ಬಿ ಬಿ ಚಿಮ್ಮನಕಟ್ಟಿ ಸೇರಿ 42 ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ. ಮೇಲುಕೋಟೆಯಲ್ಲಿ ದಿವಂಗತ ರೈತ ನಾಯಕ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರು ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದರಿಂದ ಈ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಣೆ ಮಾಡದಿರಲು ನಿರ್ಧರಿಸಿದೆ.
ವಲಸಿಗರಿಗೆ ಟಿಕೆಟ್: ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಎನ್ ವೈ ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರು ಮತ್ತು ಬಾಬೂರಾವ್ ಚಿಂಚನಸೂರು ಅವರಿಗೆ ಗುರುಮಿಠಕಲ್, ಎಸ್ ಆರ್ ಶ್ರೀನಿವಾಸ್ ಅವರಿಗೆ ಗುಬ್ಬಿ ಕ್ಷೇತ್ರದಿಂದ, ವಿ ಎಸ್ ಪಾಟೀಲ್ ಅವರಿಗೆ ಯಲ್ಲಾಪುರ, ಕೆ ಆರ್ ಪೇಟೆಯಿಂದ ಬಿ ಎಲ್ ದೇವರಾಜ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದ ವೈ ಎಸ್ ದತ್ತಾ ಅವರಿಗೆ ಟಿಕೆಟ್ ತಪ್ಪಿದ್ದು, ಕಡೂರು ಕ್ಷೇತ್ರದಿಂದ ಆನಂದ್ ಕೆ ಎಸ್ ಅವರಿಗೆ ಅವಕಾಶ ನೀಡಲಾಗಿದೆ.
ಯಾರಿಗೆಲ್ಲ ಟಿಕೆಟ್?:ಗಂಗಾವತಿ-ಇಕ್ಬಾಲ್ ಅನ್ಸಾರಿ, ಕಲಘಟಗಿ- ಸಂತೋಷ್ ಲಾಡ್, ಚನ್ನಗಿರಿ-ಬಸವರಾಜ ವಿ ಶಿವಗಂಗಾ, ನರಗುಂದ- ಬಿ ಆರ್ ಯಾವಗಲ್, ವಿಜಪುರ ಸಿಟಿ - ಅಬ್ದುಲ್ ಮುಶ್ರಿಫ್, ಮುಧೋಳ್-ಆರ್ ಬಿ ತಿಮ್ಮಾಪುರ, ಗೋಕಾಕ್ - ಮಹಾಂತೇಶ್ ಕಡಾಡಿ, ನಿಪ್ಪಾಣಿ-ಕಾಕಾಸಾಹೇಬ್ ಪಾಟೀಲ್, ಸವದತ್ತಿ - ವಿಶ್ವಾಸ್ ವಸಂತ್ ವೈದ್ಯ, ಬೀಳಗಿ-ಜೆ ಟಿ ಪಾಟೀಲ್, ಬಾಗಲಕೋಟೆ- ಹೆಚ್ ವೈ ಮೇಟಿ, ಶಿರಸಿ - ಭೀಮಣ್ಣ ನಾಯಕ್, ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ್.
ಉಡುಪಿ - ಪ್ರಸಾದ್ ರಾಜ್ ಕೆ., ತುಮಕೂರು ಸಿಟಿ - ಇಕ್ಬಾಲ್ ಅಹಮದ್, ಯಲಂಹಕ - ಕೇಶವ್ ರಾಜಣ್ಣ ಬಿ, ಯಶವಂತಪುರ - ಎಸ್ ಬಾಲರಾಜ ಗೌಡ, ಮಹಾಲಕ್ಷ್ಮೀ ಲೇಔಟ್ - ಕೇಶವ್ ಮೂರ್ತಿ, ಪ್ರದ್ಮನಾಭ ನಗರ - ವಿ ರಘುನಾಥ್ ನಾಯ್ಡು, ಮಂಡ್ಯ - ಪಿ ರವಿಕುಮಾರ್, ಕೃಷ್ಣರಾಜಪೇಟೆ- ಬಿ ಎಲ್ ದೇವರಾಜ್, ಬೇಲೂರು - ಬಿ ಶಿವರಾಂ, ಮಡಿಕೇರಿ - ಡಾ.ಎಂ ಗೌಡ, ಚಾಮುಂಡೇಶ್ವರಿ - ಸಿದ್ದೇಗೌಡ, ಕೊಳ್ಳೇಗಾಲ- ಎ ಆರ್ ಕೃಷ್ಣಮೂರ್ತಿ, ನಾಗಠಾಣಾ - ವಿ ಕಟಕದೊಂಡ, ಕಿತ್ತೂರು - ಬಾಬಾಸಾಹೇಬ ಪಾಟೀಲ್, ಚಿತ್ರದುರ್ಗ - ಕೆ ಸಿ ವೀರೇಂದ್ರ, ಹೊಳಲ್ಕೇರೆ - ಆಂಜನೇಯ ಹೆಚ್, ಕುಡ್ಲಗಿ - ಡಾ. ಶ್ರೀನಿವಾಸ ಎನ್ಟಿ, ಅಫ್ಜಲಪುರ್ - ಎಂ ವೈ ಪಾಟೀಲ್, ಯಾದಗಿರಿ - ಚನ್ನರೆಡ್ಡಿ ಪಾಟೀಲ್ ಅವರಿಗೆ ಟಿಕೆಟ್ ಅನೌನ್ಸ್ ಆಗಿದೆ.